ಪೋಸ್ಟ್‌ಗಳು

2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
# ಶ್ರೇಷ್ಠ_ಕೇಕ್ ...               ಬರ್ರೋ ಬರ್ರೋ 7 ನೇತ್ತೆ ಅವರು ದೊಡ್ಡ ಕೇಕ ತಂದು ಎಲ್ಲಾ ಸರ ಗೂ ತಿನ್ಸ್ಯಾರ.. ನಾವೇನು ಮಾಡುನು... (೬ ನೇಯ ತರಗತಿ)..                   ಒoದ ಕೆಲ್ಸಾ ಮಾಡೂನೂ  ನಮ್ಮೂರಾಗಂತೂ #ಕೇಕ #ಸಿಗುದಿಲ್ಲಾ ಎಲ್ಲಾರು ೧ ರೂಪಾಯಿದು ಸಿಹಿ ಬ್ರೇಡ್ ಸಿಗತದಲ್ಲ ಅದನ್ನ ತಗೊಂದು ಬರ್ರಿ ನಾಲ್ಕ ಮಂದಿ black heart ಚಾಕ್ಲೇಟ್ ತಗೊಂದು ಬರ್ರಿ ಕೇಕ್ ನಾವೇ ರೆಡಿ ಮಾಡೂಣು...       ಇಷ್ಟೇಲ್ಲಾ ತಂದು.. ಒಂದು ತಾಟಿನಲ್ಲಿ ಕೇಕಿನ ತರಾನೇ ಜೋಡಿಸಿ...  ಸುತ್ತಲೂ ಉದ್ದನೆಯ #ಮೈಸೂರು_ಪಾಕಿನ_ಅಲಂಕಾರ ...                        ಅಶ್ಟೊತ್ತಲ್ಲಿ ನಾನು ಹಾಜರಿ ತೆಗೆದುಕೊಂಡು ತರಗತಿಗೆ ಹೊಗಬೇಕೆಂದರೆ ಮುಚ್ಚಿದ ಬಾಗಿಲಿನಿಂದ ಒಂದು #ಮುಖ_ಇಣುಕಿ ಹಾಕಿ ಹೇಳುತ್ತದೆ.. ಸರ ನಿಲ್ಲಿ ಸ್ವಲ್ಪ ತಡ ಮಾಡಿ ಬನ್ನಿ  ಪ್ಲೀಜ್... ಒಕೆ ಅಂದ ನಾನು 5 ನಿಮಿಷ ತಡ ಮಾಡಿ ಹೊದರೆ.         #necessity_is_the_mother_of_inventions #ಅವಶ್ಯಕತೆ_ಅನ್ವೇಷಣೆಯ_ತಾಯಿ ಅನ್ನೋ ಮಾತು ಎಷ್ಟು ಸತ್ಯ ಅನ್ನಿಸಿತು..     ನನ್ನ ವಿದ್ಯಾರ್ಥಿಗಳು ಮಾಡಿದ ಕೇಕ ಬಹುಶಃ ...

ಹಾಸ್ಟೆಲ್ ಹಬ್ಬ ೨೦೧೯

ಇಮೇಜ್
          #ನಮ್ಮ ಹಾಸ್ಟೆಲ ಹಬ್ಬ#೨೦೧೯ #                          ಒಂದೇ ತಾಟಲ್ಲಿ ಎಂಟು ಕೈಗಳು.. ಮಾತಿನ ಭರಾಟೆಯಲ್ಲಿ ಮುಗಿದು ಹೋಗದ ತುತ್ತುಗಳು....      ಎಲ್ಲೋ ಇದೀಯಾ....? ಭೇಟಿನೆ ಆಗಿಲ್ಲವಲ್ಲೋ..? ಎಂದು ಅಪ್ಪಿಕೊಳ್ಳುವ ತೋಳುಗಳು... ನಮ್ಮ ಬ್ಯಾಚಿನವರು ಯಾರು ಬಂದಿದ್ದಾರೆ ಎಂದು ಹುಡುಕುತ್ತಿದ್ದ ಕಂಗಳು.. ತಮ್ಮ ತಮ್ಮ ರೂಮುಗಳಿಗೆ ಹೋಗಿ. ತಾವು ಮಲಗುತ್ತಿದ್ದ ಕಾಟಾಗಳಿಗೆ ಕೈ ಬಡಿದು ಬಂದ ಕೈಗಳು.. ನಾಗೇಶ ಅಣ್ಣ ಹಾಗೂ ಮನ್ಸುೂರಲಿ ಅಣ್ಣಂದಿರ ಕರೆಗೆ ಓಡಿ ಬಂದ ದಶದಿಕ್ಕಿನ ತಮ್ಮಂದಿರು... ಹಿರಿಯರು ನೀಡಿದ ಸನ್ಮಾನ ಸ್ವೀಕರಿಸಿದ ಕೊರಳುಗಳು... ಮತ್ತೆ ನೆನಪಾಗಿ ಕಾಡಿದ ವಿಜಯಪುರ ಟಕ್ಕೆ ಬಿಸಿಎಮ್ ವಸತಿ ನಿಲಯದ ನೆರಳುಗಳು.... ಖಾಲಿ ತಾಟು ಹಿಡಿದು ಸರತಿ ಸಾಲಿನಲ್ಲಿ ಊಟಕ್ಕೆ ನಿಂತ ಕಾಲುಗಳು.... ನಮ್ಮಲ್ಲಿ ಇವತ್ತಿಗೂ ಬರಲೇ ಇಲ್ಲ ಯಾವುದೇ ಮೇಲುಗಳು ಯಾವುದೇ ಕೀಳುಗಳು.... ಇಷ್ಟೇಲ್ಲಾ ಸ್ವರ್ಗದ ಆನಂದ ಸಿಕ್ಕಿದ್ದು ಇಂದು ನಡೆದ ನಮ್ಮ BCM ವಸತಿ ನಿಲಯದ ಹಬ್ಬದಲ್ಲಿ ... ಆಹಾ!!!! ಅದ್ಯಾವ ಜನ್ಮದ ಪುಣ್ಯಾತಿಪುಣ್ಯದ ಫಲವೋ ಗೊತ್ತಿಲ್ಲ!!!.. ನಾವೇಲ್ಲ ಮತ್ತೆ ಮತ್ತೆ ಸೇರುತ್ತೆವಲ್ಲ.. ಅದರಲ್ಲಿರುವ ಸುಖ ಮತ್ತೆಲ್ಲೂ ಸಿಗಲಿ್ೢಲ್ಲ ಅಲ್ವಾ ಅಣಂದಿರೆ...

RASULASAB GOUNDI PSI...

ಇಮೇಜ್
ಅಂದುಕೊಂಡದ್ದನ್ನೆ_ಸಾಧಿಸಿದ_ಸರದಾರ... ಯಾವುದೇCET_ಕೋಚಿಂಗ_ಇಲ್ಲದೆ_PSI                         ನಿನ್ನೊಳಗಿನ ನಿನ್ನನ್ನು ನೀನೆಂದು ಮಾರಿಕೊಳ್ಳಬೇಡ. ಏನಾದರೊಂದು ಕಾರಣ ಹೇಳಿ ನಾನು ಎಲ್ಲರಂತೆಯೇ ಎಂದು ಜಾರಿಕೊಳ್ಳಬೇಡ. ಬಡವರ, ನಿರ್ಗತಿಕರ, ನಿರಪರಾಧಿಗಳ ರಕ್ತವೆಂದು ಹೀರಿ ಕೊಳ್ಳಬೇಡ. ಸೊಕ್ಕಿನ ಶ್ರೀಮಂತರು , ಅನೀತಿವಂತರು ನನ್ನವರೆಂದು ಎಂದಿಗೂ ಸಾರಿ ಕೊಳ್ಳ ಬೇಡ. ಸತ್ಯದ ಮಾರ್ಗ ಬಿಟ್ಟು ನಡೆವ ಸ್ನೇಹಿತನಿದ್ದರು ಅವನೊಂದಿಗೆ ಸೇರಿ ಕೊಳ್ಳಬೇಡ. ಜೀವನದ ಚೀಲಕ್ಕೆ ಆಸೆಯ ತೂತು ಹಾಕಿ ಸೊರಿ ಹೋಗಬೇಡ. ಕಾನೂನೇ ನಿನ್ನ ದೈವ. ಸಂವಿಧಾನವೇ ನಿನ್ನ ಧರ್ಮ ಎನ್ನುವುದನ್ನು ಮರೆಯಬೇಡ . ನೀನು ನನ್ನ ತಮ್ಮ ಹತ್ತರೊಂದಿಗೆ ಕೂಡಿ ಹನ್ನೊಂದಾಗಬೇಡ. ಬೇರೊಬ್ಬನಿಗೆ ಉಳಿದು ನೋಡು ಇತಿಹಾಸ ಯಾವತ್ತು ಹಾಡುತ್ತಿರಲಿ ನಿನ್ನದೇ ಹಾಡು. ದಿನ ಬೆಳಗಾದರೆ ಬೇರೆಯವರ ಹೊಲಕ್ಕೆ ಬುತ್ತಿ ಕಟ್ಟಿಕೊಂಡು, ಕುರುಪಿ ಕೈಯಲ್ಲಿ ಹಿಡಿದುಕೊಂಡು, ದುಡಿಯಲು ಹೋಗುವ ಅಮ್ಮ ಅನಕ್ಷರಸ್ಥೆ. ಅಪ್ಪ ಬೇರೆಯವರ ಅಂಗಡಿಯಲ್ಲಿ ಅರುವತ್ತು ರೂಪಾಯಿಗೊಂದು ಪ್ಯಾಂಟ್ ಹೊಲಿಯುವ ಟೈಲರ್. ಅಣ್ಣಾ ಪ್ರಾಥಮಿಕ ಶಾಲೆಯ ಶಿಕ್ಷಕ. ತಂಗಿ ಇನ್ನು ಓದುತ್ತಿರುವ ಹುಡುಗಿ... ಇಂತಹುದರಲ್ಲಿ ಹತ್ತಾರು ಕಡೆ ಅಪ್ಲಿಕೇಷನ್ ಗಳನ್ನು ಹಾಕಿ ಓಡಾಡಿ, ತಿರುಗಾಡಿ ಫೇಲಾಗಿ ಬಂದು ಮನೆಯಲ್ಲಿ ಊಟವಿಲ್ಲದೆ ಬ...

ಹುಟ್ಟು_ಹಬ್ಬದ_ಶುಭಾಶಯಗಳು....

ಇಮೇಜ್
# ಹುಟ್ಟು_ಹಬ್ಬದ_ಶುಭಾಶಯಗಳು #ಸರ್               ಸರ್ ನಮಸ್ಕಾರ.. ನಾನು ನಿಮ್ಮ ಸಜ್ಜಿ ತೆನಿ ವಿದ್ಯಾರ್ಥಿ...                      Mashyak Goundi  ಹೇಗಿದ್ದೀರ ಸರ್...??  ನೀವು ಯಾವತ್ತು ಆರಾಮಾಗಿ ಇರ್ತೀರಾ..ಬಿಡಿ...   ಯಾಕೆಂದ್ರೆ...?   ಈ ನಿಸರ್ಗ ಅರಿಯುವಂತೆ ನಿಸರ್ಗದ ಖುಷಿಗಾಗಿ ಹಗಲಿರುಳು ದುಡಿಯುವ ಜೀವಿ ನೀವು ಸರ್.... ನಿಮ್ಮನ್ನು ಈ ನಿಸರ್ಗ ತಾನಾಗಿಯೇ ಆರಾಮಾಗಿ ಇರೋ ಹಾಗೇ ನೋಡಿಕೊಳ್ಳುತ್ತದೆ...                                 ಆದ್ರೆ ನೀವು #ಕ್ರಿಯಾಶೀಲ_ಪ್ರಯೋಗಗಳ ನಮ್ಮ ತಾಲೂಕಿನ ಅದಮ್ಯ್ ಪಂಡಿತ.. ಅದಕ್ಕೆ ನೀವು ಏನಾದರು ಹೊಸದು ಮಾಡಲು ಹೋಗಿಯೇ ನಿಮ್ಮ ದೇಹಕ್ಕೆ ನೀವೇ ರೆಸ್ಟ್ ಕೊಡೋದಿಲ್ಲ ಅದಕ್ಕೆ ನಿಮ್ಮ ದೇಹ ದಣಿಯುತ್ತದೆ...  ಆದ್ರೆ ನನಗೆ ತಿಳಿದಂತೆ ನಿಮ್ಮ ಮನಸ್ಸು,ಬುದ್ದಿ ಯಾವತ್ತೂ ದಣಿಯುವುದಿಲ್ಲ...                           ಅದಕ್ಕೆ ಒಬ್ಬ #ತತ್ವಜ್ಞಾನಿ ಹೇಳುವಂತೆ " ಸಾಧಕ ಯಾವತ್ತೂ ತಾ ಸುಖ ಪಡುವುದಿಲ್ಲ ಯಾಕೆಂದ್ರೆ ಅವನ ...

ಶ್ರೀ. ಚಾಂದ ಗೌಂಡಿ ಸರ್..ಸಾ ॥ ದೇ.ಹಿಪ್ಪರಗಿ...

ಇಮೇಜ್
ನನ್ನ ಜೀವನದ ಮಹಾಗುರು ...ಗೌOಡಿ ಸರ್....  14 #ವರ್ಷದ #ನಂತರ #ಗೌOಡಿ_ಸರ್ ಗೆ   #ಗೌOಡಿ #ಸರ್ #ಭೇಟಿಯಾದ #ದಿನ ..... .....        ಅಂದು  ಅಳುತ್ತಾ ಅಳುತ್ತಾ ಟ್ಯೂಷನಗೆ ಹೋದ 8 ನೇ ತರಗತಿಯ ವಿದ್ಯಾರ್ಥಿ ನಾನು,  ನನ್ನಳುವಿಗೆ ಕಾರಣ ಕೇಳಿದರು ಹೇಳದೆ ಇರುವ ಹಠಮಾರಿ ನಾನು, ಟ್ಯೂಷನ್ ಮುಗಿದ ನಂತರ ನನ್ನನ್ನು ಅಲ್ಲೇ ನಿಲ್ಲಿಸಿಕೊಂಡು ಯಾಕೆ ಅಳುತ್ತಾ ಟ್ಯೂಷನಗೆ ಬಂದೆ ಹೇಳು ಏನಾಯಿತು ಎಂದು ಪ್ರಶ್ನಿಸಿದಾಗ...  ನನ್ನನ್ನು ಅಂದು ಅಳಿಸಿದ್ದು ಯಾರ ಮಾತು ಅಲ್ಲ, ಯಾರ ಸಂಪತ್ತು ಅಲ್ಲ,  ಅದು #ನನ್ನದೇ #ಹೊಟ್ಟೆಯ_ಹಸಿವು ,                        ಅದನ್ನು ಹೇಳದೆ ಅರಿತುಕೊಂಡು ಈ ಮಹಾಗುರು ತಮ್ಮ ಮನೆಯಲ್ಲಿ ಅಮ್ಮನಿಂದ ಅಡಿಗೆ ಮಾಡ್ಸಿ ಪಕ್ಕದಲ್ಲೇ ಕೂಡಿಸಿಕೊಂಡು ತಿನ್ನಿಸಿದ ನನ್ನ ಬದುಕಿನ #ತಾತ್ವಿಕ_ನಾಯಕ .......            ಆಗಾಗ ಜೀವನದ ಕಷ್ಟಕ್ಕೆ ಎದೆಯೊಡ್ಡಿ ನಿಲ್ಲೋ ಎದೆಗಾರಿಕೆಯನ್ನು ನನ್ನಲ್ಲಿ ತುಂಬುತ್ತಾ ಬಂದ ಮಹಾನ ಮಾರ್ಗದರ್ಶಕ. ಕೆಲವು ದಿನ ನನ್ನ ಪರಿಸ್ಥಿತಿ ಅರ್ಥೈಸಿಕೊಂಡು ತಮ್ಮ ಮನೆಯಲ್ಲೇ ಉಳಿಸಿಕೊಂಡು ಶಿಕ್ಷ...
ಇಮೇಜ್
# ನಿಮ್ಮಂಥವರು #ಬೇಕು #ಸರ್........ ....          ನಾನು ಒಂದು ವಾಕ್ಯ ಎಲ್ಲೋ ಕೇಳಿದ ಹಾಗೇ ಮತ್ತೆ ಮತ್ತೆ ನೆನಪಾಗುತ್ತದೆ ಅದೇನು ಅಂದ್ರೆ...  " ಸರಿಯಾದ ವ್ಯಕ್ತಿಗಳನ್ನು, ಸರಿಯಾದ ಜಾಗದಲ್ಲಿ, ಸರಿಯಾದ ಸಮಯದಲ್ಲಿ, ಸರಿಯಾದ ಉದ್ದೇಶಕ್ಕಾಗಿ ಈ ನಿಸರ್ಗ ಸೆಳೆದು, ಎಳೆದು ಕೂಡಿಸಿ ಬಿಡುತ್ತದೆ"....       ನಿನ್ನೆ ನಮ್ಮ ಸಿಂಧುಗೇರಿ ಶಾಲೆಯಲ್ಲಿ ಜರುಗಿದ್ದು ಅದೇ ಅಲ್ವೇ...??      ಅದೊಂದು ನಮ್ಮ ಶಾಲೆಯ  ಸಜ್ಜಿ ತೆನಿ ಹುಲುಸಾಗಿ ಬೆಳೆಯುತ್ತಿದ್ದ ಕಾಲ... ಆಗ ದೂರದ #ಹುಬ್ಬಳ್ಳಿಯಿಂದ ನನಗೆ ಫೋನು ಮಾಡಿ ಮಾತಾಡಿದ #ಜೀವನಾನುರಾಗಿ, #ಹೃದಯವಂತ, #ಶೈಕ್ಷಣಿಕ ಕಾಳಜಿಯ ಕರುಳು, ಬಡ ಮಕ್ಕಳಿಗೆ ಸಹಾಯಕ್ಕೆ ಮುಂದೆ ಕೈ ತರುವ ದಾನಿಗಳಾದ   #ಸನ್ಮಾನ್ಯ ಶ್ರೀ.. #ಚನ್ನಬಸಪ್ಪ #ಭೂಮಾ ಸರ್... ACC ಕಂಪನಿಯ DIVISION MANAGER... ಆದ ಇವರು ಆವತ್ತು ನನಗಿತ್ತ ಭರವಸೆ ಏನು ಗೊತ್ತಾ...??         ಸರ್ ನಾನು ನಿಮ್ಮ ಶಾಲೆಗೆ ಭೇಟಿ ಕೊಡ್ತೀನಿ ಹಾಗೂ #ಒಬ್ಬ #ಬಡ_ಪ್ರತಿಭಾವಂತ_ವಿದ್ಯಾರ್ಥಿಯ #ಸಂಪೂರ್ಣ_ಶಿಕ್ಷಣದ_ಜವಾಬ್ದಾರಿ_ಹೊರುತ್ತೇನೆ...  ಅತ್ತ ಅವರ ಮಾತು ಕೇಳಿ 6 ತಿಂಗಳ ಹಿಂದೆ ನನ್ನ ಕೆನ್ನೆ ತೊಯ್ದಿತ್ತು..    ಆ ಮಾತನ್ನು ಶ್ರೀಯುತರು ನಿನ್ನೆ ಸಿಂಧುಗೇರಿ ಶಾಲ...
ಇಮೇಜ್
# ರಾತ್ರಿ_ಕಂಡ_ಕನಸು  #ಹಗಲೇ_ಆಯಿತು_ನನಸು      ಅರ್ಪಣೆ ;; #ಶ್ರೀಧರ್_ರೆಡ್ಡಿ  ಸಿಂಧುಗೇರಿ ಶಾಲೆಯ ಅಣ್ಣ                 ಕಣ್ಣ ರೆಪ್ಪೆ ಮುಚ್ಚದೇ ಏನನ್ನೋ ಮನಸಿನ ಕಣ್ಣಿಂದ ನೋಡುತ್ತಾ ಕೂತಿದ್ದೆ. ಎಷ್ಟೊತ್ತಿನ ವೆರೆಗೂ ಕಣ್ಣ ರೆಪ್ಪೆ ಬಡಿಯದೆ ಇರ್ಲಿ ಹೇಳಿ ???  ಸೋತ ಕಣ್ಣ ರೆಪ್ಪೆಗಳು ಮುಚ್ಚುವೆಷ್ಟರಲ್ಲಿ ತಿಳಿಯದೆ ನನ್ನ ಕೆನ್ನೆ ಹಸಿಯಾಗಿ ಹೋಗಿತ್ತು...    ಮಳೆ ನಿಂತರು ಹಳೆಯ ಮನೆಯ ಜಂತಿಯಿಂದ ಸೋರುವ ಮಳೆ ಹನಿಯಂತೆ ನನ್ನ ಅನಂದ ಹರಿಯುತ್ತಿತ್ತು..         ಯಾಕೆ ಅಂತೀರಾ ??? ಇಂದು ನನ್ನ ಹಾಗೂ ನಮ್ಮ H M ಎಸ್ ಎಸ್ ಎಲಿಬಳ್ಳಿ sir ಮತ್ತು BGM, SKK,YSB, ಹಾಗೂ SKG ( ಅತಿಥಿ ಶಿಕ್ಷಕರು)ಗಳು ಸುಮಾರು 22 ತಿಂಗಳಲ್ಲಿ ಪಟ್ಟ ಶ್ರಮದ ಸಾರ್ಥಕತೆಯ ಧ್ವನಿಯು 400 K M ದೂರದ ಹೈದರಾಬಾದ್ ನಿಂದ ಬಂದಿತ್ತು.   #ಆ_ಧ್ವನಿಯು  ಆ ಧ್ವನಿಯೂ ಕಣ್ಣಿರು ಹರಿಸಿತ್ತು  ಆದರೂ ನಗಿಸಿತ್ತೂ  ಶಿಕ್ಷಕನ ಕನಸಿಗೆ ಆಧಾರವಾಗಿತ್ತು  ನನ್ನ ವಿದ್ಯಾರ್ಥಿಗಳ ಮುಖದ ನಗುವಾಗಿತ್ತು  ನಮ್ಮ ಶಾಲೆಯನ್ನು ಎತ್ತಿಕೊಂಡಂತ್ತಿತ್ತು  ನನ್ನೆಲ್ಲಾ ಕನಸುಗಳಿಗೆ ಹಾರಲು ರೆಕ್ಕೆ ಕೊಟ್ಟಿತ್ತು  ಇಡೀ ಶಾಲೆಯ ಮನವನ್ನು ಮೌನವಾಗಿ ತಟ್ಟಿತ್ತು  ಆ ದೂರದ ಧ್ವನಿ ಯಾರದು ...
ಇಮೇಜ್
ಅಣ್ಣನ ಲೇಖನ....... ಕು// ಮಸ್ಯಾಕ ಎಂ ಗೌ೦ಡಿ [ಶಿಕ್ಷಕರು] ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಿಂಧುಗೆರಿ.. ತಾ/ಬಸವನ ಬಾಗೇವಾಡಿ...ಜಿ/ವಿಜಯಪುರ.         ನಾನು ಕಂಡ ಶಿಕ್ಷಕದೇವರು....ಮಕ್ಕಳಲ್ಲಿ ತಮ್ಮ ಹೆತ್ತವರನ್ನು ಕಾಣುವ,ಮಕ್ಕಳನ್ನು ಅವರ ಹೆತ್ತವರಿಗಿಂತಲೂ ಮಿಗಿಲಾಗಿ ಪ್ರೀತಿಸುವ, ಅವರ ಭವಿಷ್ಯಕ್ಕಾಗಿ ಶಾಲಾ ಅವಧಿಯನ್ನು ಮೀರಿ ತಮ್ಮ ಜ್ಞಾನಾಮೃತ ಉಣಬಡಿಸುವ,ಪ್ರಯೋಗಾತ್ಮಕ ಚಟುವಟಿಕೆಗಳ ಭಂಡಾರವೆ ಆದ ಶಿಕ್ಷಕರಿವರು....          ಹಾಡು ನೃತ್ಯ ಸಾಹಿತ್ಯ ರಚನೆ ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಹೊಸ ವಿಧಾನ...ಆಂಗ್ಲ ಭಾಷೆಯ ಮೇಲಿರುವ ಹಿಡಿತ,ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೆಕೆನ್ನುವ ತುಡಿತ...ಸಹ ಶಿಕ್ಷಕರ ಜೊತೆಗಿನ ಸಮನ್ವಯತೆ....ಈ ಎಲ್ಲ ಅಂಶಗಳನ್ನು ಇವರಲ್ಲಿ ನಾನು ಕಾಣುತ್ತಿದ್ದೆನೆ..                 ತಾಲೂಕಿನ ಕೊನೆ ಗ್ರಾಮ ಸಿಂಧುಗೆರಿ ,ಬಹುತೇಕ ಶಿಕ್ಷಕರು ಹಿಂದೇಟು ಹಾಕುವ ಶಾಲೆಯಲ್ಲಿ ನೆಲೆನಿಂತು ಇಡೀ ತಾಲೂಕಿನ ಶಿಕ್ಷಕರು ಮತ್ತು ಅಧಿಕಾರಿ ವರ್ಗದ ಗಮನ ಸೆಳೆದು,,,ಇದು ನನ್ನ ಕರ್ತವ್ಯವೆಂದು ಅಭಿಮಾನದಿಂದ ಹೇಳುವ ಇವರ ಬಗ್ಗೆ ಬರೆದರೆ ಬಿಡುವಿಲ್ಲದೆ,ದಣಿವಿಲ್ಲದೆ ಬರೆದೇನು..          ಯಂಭತ್ನಾಳದ ಪುಣ್ಯದ ಸಿರಿಯಾಗಿ ಅದಮ್ಯ ವಿಶ್ವಾಸದಿಂದ ಒಂದು ಮಾ...
ಇಮೇಜ್
#ಮಾತಿಗಿಂತ, #ಪದಕ್ಕಿಂತ_ಮೌನವೇ #ಮುಖ್ಯವಾಯಿತು ನನ್ನ ಇಂದಿನ ಬದುಕಿಗೆ.... ಕಾನೂನು ಜಯಸಾಧಿಸಿತು... #ಭಾವ_ಲೋಕವೇ #ಸೋತು_ಹೋಯಿತು.....  ಇಲ್ಲಿ ಕಾನೂನು ರಚನೆಯಾದದ್ದು ಭಾವದಿಂದ್ಲೇ ಅಂತ ಯಾರಿಗೆ ಅರ್ಥವಾಯಿತು....???????,,,,    ಆದ್ರೂ ಭಾವಕ್ಕೂ ಮಿಗಿಲಿಲ್ಲ ಯಾವ ಕಾನೂನು....  ಅದನ್ನು ಅರ್ಥ ಮಾಡಿಕೊಳ್ಳುವವ ಭಾವದ ಬಳಲುವಿಕೆಯನ್ನು ಅರಿತವನು.....       ನಿಜವಾಗಿಯೂ ನಾನು ಸೋತೆ ನಿಮ್ಮ ಪ್ರೀತಿಗೆ..     #ನಿಮ್ಮನ್ನು #ಅಳಿಸಿ #ಮತ್ತಷ್ಟು #ಪಾಪಿಯಾದೆ....  #ಕನಸುಗಳೆ....   #ನನ್ನನ್ನು #ದಯವಿಟ್ಟು #ಕ್ಷಮಿಸಿ...   ನಿಮ್ಮೂರ ಶಾಲೆ.. ಆ ಗೇಟು, ಗೋಡೆ, ಗಿಡ, ಕ್ಲಾಸ್ಸು..  ಬಸ್ಸು..  ಎಲ್ಲವೂ ನನಗೆ ಮುಂದಿನ ಜೀವನಕ್ಕೆ ದೊಡ್ಡ ನೆನಪಿನ ಭಂಡಾರವೇ ಕೊಟ್ಟಿವೆ.... ಪ್ರತಿ ವರ್ಷ ನಮ್ಮೂರ ಜಾತ್ರೆಗೆ ನಿಮಗಾಗಿ ಕಾಯುವೆ ಬರುತ್ತೀರಾ ಬಂದೆ ಬರುತ್ತೀರಾ...   #ಬರಲೇ #ಬೇಕು.... ನಾನು ಕಳಿಸಿದ್ದು ಭಾವ ಜೀವನ.....  ಅಲ್ವೇ...                          ಇಂತಿ Mashyak Goundi                               ...

ಪುರದಾಳ... ಪುಣ್ಯವಂತರ ನಾಡು...

ಇಮೇಜ್
#ಎಂಟನೇ_ದಿನ....        ನನ್ನ ಪ್ರೀತಿಯ ಫೇಸ್ಬುಕ್ ಸ್ನೇಹಿತರೆ....  ಇಂದು ಪುರದಾಳ ಶಾಲೆಯಲ್ಲಿ #ನನ್ನ_ಎಂಟನೇ_ದಿನ... ಆದರೂ ಆ ಊರಿಗೆ ಬಹಳ #ಹಳೆಯ #ವ್ಯಕ್ತಿ ಏನೋ ಅನ್ನುವಂತ ಭಾವವನ್ನು ಇವತ್ತು ಪುಣ್ಯವಂತರ  ನಾಡು #ಪುರದಾಳ_ಗ್ರಾಮಸ್ಥರು...  ನನ್ನ  ಮನದಲ್ಲಿ ತುಂಬಿ ಬಿಟ್ಟರು...       ಇಲ್ಲಿ ಅವರು ಮಾಡಿದ್ದೂ ಬಹು ದೊಡ್ಡ ಕಾರ್ಯ ಅನ್ನೋದು ನನ್ನ ಮನೋಭಾವ ಏಕೆಂದರೆ...  ನಾನು ಹೋದ ಎಂಟು ದಿನಗಳಲ್ಲಿ ಆ ಊರಿನ ಜನ ಇವತ್ತು ನನ್ನ #ಕೈ #ಹಿಡಿದು #ಮಾತಾಡಿ ಹೇಳಿದರು...             #ಸರ_ನೀವು_ಬಂದಿದ್ದು_ತುಂಬಾ #ಒಳ್ಳೆಯದಾಯಿತು...   ನಿಮ್ಮ ಸಜ್ಜಿ ತೆನಿ ನಾವೆಲ್ಲ ನೋಡೇವ್ರಿ....                          ನಮ್ಮ #ಪುರದಾಳ_ಸಾಲಿ_ಎಲ್ಲರೂ #ಸೇರಿ #ಮೇಲ್ಮಟ್ಟಕ್ಕೆ_ತಗೊಂದು_ಹೋಗುನ್ರಿ #ಅಂದ್ರು....  #ನನ್ನ  #ಕನಸನ್ನು_ಅವರೇ #ಕಟ್ಟಿಕೊಂಡಾಗ ನನ್ನಷ್ಟು #ಭಾಗ್ಯಶಾಲಿ ಇನ್ನೊಬ್ಬ ಇ ಧರೆಯೊಳು ಸಿಗಲಾರ ಅನ್ನೋದು ನನ್ನ  ಕಲ್ಪನೆ....                  ಅದೇನೇ ಆಗಲಿ ನಾವು ಬದುಕಿನಲ್ಲಿ ಪಡೆದಿದ್ದನ್ನೇ ಉತ್ತಮ ಅನ್ನೋದಕ್...
ಇಮೇಜ್
..#ಗೆಳೆಯರೇ... ...   ನಾನು ಇಂದು ಸಿಂದಗಿ ತಾಲೂಕಿನ ಪುರದಾಳಕ್ಕೆ ಕರ್ತವ್ಯಕ್ಕೆ ವರದಿ ಮಾಡಿಕೊಂಡೆ....                 ಹೊಸ ಸರು,  ಹೊಸ ಸರು ಅನ್ನೋ ಸುದ್ದಿ ಶಾಲೆಯ ತುಂಬಾ...  ಆದರೆ ಹತ್ತಿರಕ್ಕೆ ಯಾವ ಮಕ್ಕಳು ಸುಳಿಯಲಿಲ್ಲ..  ಬಾಗಿಲುಗಳ ಸಂದಿಯಿಂದ, ಕಿಟಕಿಯಿಂದ, ಗೋಡೆಯ ಪಕ್ಕದಿಂದ ಊರಿಗೆ ಹೊಸದಾಗಿ ಮದುವೆಯಾಗಿ ಬಂದ ಸೊಸೆಯನ್ನು ಊರಿನ ಎಲ್ಲ ಮುದುಕಿಯರು ಹಣಿಕಿ ಹಾಕಿ ಹಾಕಿ ನೋಡುವಂತೆ ಎಲ್ಲರ ಕಣ್ಣಿಗೆ ಗುರಿಯಾದ #ಮದುವಣಗಿತ್ತಿಯಾಗಿತ್ತು ನನ್ನ ಮನ,  ಅದರ ಮದ್ಯ ಮತ್ತೆ ಮತ್ತೆ #ಸಿಂಧುಗೇರಿ ಶಾಲೆ ನೆನಪಾಗಿ ಕಾಡುತ್ತಿತ್ತು..                       ಬಿಟ್ಟು ಹೋದವ ನೀನೆ ಇನ್ನು ಅನುಭವಿಸು ಎನ್ನುತ್ತಿತ್ತು..    ದಿನಾಲೂ ಸುತ್ತಮುತ್ತ ಇರುವವರಿಗೆ ಸಾಕು ಎನ್ನುವಂತೆ ಮಾತಾಡುವ ನನ್ನ ಬಾಯಿಗೆ ಯಾಕೋ ಬಾಯಿ ಬಿಚ್ಚಬೇಡ ಅನ್ನೋ ಸೂಚನೆ ಮನಸು ನೀಡುತ್ತಿತ್ತು...       ಹಳೆಯ ನೆನಪುಗಳು ಭಾರವಾಗಿ ನನ್ನ ಕರ್ಚಿಫು ಅರಿವಿಲ್ಲದಂತೆ ಕಣ್ಣ ಸಮೀಪ ಹೋಗುತ್ತಿತ್ತು..      ಹಾಗೆ ಹಳೆಯ ನೆನಪಿನಲ್ಲೇ ಮಧ್ಯಾಹ್ನ ಊಟದ ಸಮಯವಾಯಿತು..  #ಸಹ_ಶಿಕ್ಷಕ_ವೃoದ ಹಾಗೂ ಮುಖ್ಯಗುರುಗಳು ನೀಡಿದ #ಧೈರ್ಯಕ್ಕೆ ಮನಸ...
ಇಮೇಜ್
ಸಿದ್ದಗಂಗ ಶ್ರೀಗಳು ಬರೆದಿರುವ  ಒಂದು ಕವಿತೆ* ಸಾಧ್ಯವಾದರೆ ಓಡು ಆಗಲಿಲ್ಲವಾದರೆ ನಡೆ ಅದೂ ಸಾಧ್ಯವಾಗದಿರೆ ಉರುಳಿ ಕೊಂಡು ಹೋಗು ಅಷ್ಟೇ! ಆದರೆ ಕದಲದೇ  ಬಿದ್ದಿರಬೇಡ ಒಂದೇ ಕಡೆ ಕೆಲಸ ಸಿಗಲಿಲ್ಲವೆಂದು, ವ್ಯಾಪಾರ ನಷ್ಟವಾಯಿತೆಂದು ಗೆಳೆಯನೊಬ್ಬ ಮೋಸಮಾಡಿದನೆಂದು, ಪ್ರೀತಿಸಿದವಳು ಕೈಬಿಟ್ಟಳೆಂದು!! ಹಾಗೆ ಇದ್ದರೆ ಹೇಗೆ..? ದಾಹಕ್ಕೆ ಬಾರದ ಸಮುದ್ರದ ಅಲೆಗಳು ಕೂಡಾ ಕುಣಿದು ಕುಪ್ಪಳಿಸುತ್ತವೆ ನೋಡು! ಮನಸು ಮಾಡಿದರೇ... ನಿನ್ನ ಹಣೆಬರಹ ಇಷ್ಟೇ  ಅಂದವರೂ ಸಹ... ನಿನ್ನ ಮುಂದೆ ತಲೆ ತಗ್ಗಿಸುವ  ತಾಕತ್ತು ನಿನ್ನಲ್ಲಿದೆ ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ? ಸೃಷ್ಟಿ ಚಲನಶೀಲ ಯಾವುದೂ ನಿಲ್ಲಬಾರದು ಹರಿಯುವ ನದಿ ಬೀಸುವ ಗಾಳಿ ತೂಗುವ ಮರ ಹುಟ್ಟೋ ಸೂರ್ಯ ಅಂದುಕೊಂಡಿದ್ದನ್ನು ಸಾಧಿಸಬೇಕೆಂದು  ನಿನ್ನಲ್ಲಿ ಛಲದಿಂದ ಹರಿಯುವ ರುಧಿರ ಸಹ ಯಾವುದೂ  ನಿಲ್ಲಬಾರದು. ಏಳು... ಎದ್ದೇಳು ಹೊರಡು... ನಿನ್ನನ್ನು ಅಲಗಾಡದಂತೆ  ಮಾಡಿದ ಆ ಮಾನಸಿಕ ‌ಸಂಕೋಲೆಗಳನ್ನು ಬೇಧಿಸು,  ಬಿದ್ದ ಜಾಗದಿಂದಲೇ ಓಟ ಶುರು ಮಾಡು ನೀನು ಮಲಗಿದ ಹಾಸಿಗೆ  ನಿನ್ನನ್ನು ಅಹಸ್ಯಪಡುವ ಮುನ್ನ  ಅಲಸ್ಯವನ್ನು ಬಿಡು ಕನ್ನಡಿ ನಿನ್ನನ್ನು ಪ್ರಶ್ನಿಸುವ  ಮುನ್ನ ಉತ್ತರ ಹುಡುಕು ನೆರಳು ...

ನೇತಾಜಿ.. ನಿಮಗೆ ಭಾರತವೇ ಮಾತಾಜಿ...

ಇಮೇಜ್
ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ... ಚಿನ್ನದ ಮೊಟ್ಟೆಯಿಡುವ ‘ಐ.ಸಿ.ಎಸ್’ ಅನ್ನು ಎಡಗಾಲಲ್ಲಿ ಒದ್ದು ಬಂದಾಗ ಅವರ ವಯಸ್ಸು 23, ಹಾಗೆ ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಮುಂಬಯಿಗೆ ಬಂದಿಳಿದು ಭಾರತದ ಸ್ವಾತಂತ್ಯ್ರ  ಹೋರಾಟಕ್ಕೆ ಧುಮುಕಿ ಮುಂದಿನ 25 ವರ್ಷಗಳಲ್ಲಿ, 4೦೦೦೦ -45೦೦೦  ಜನರ  ‘ಆಜಾದ್ ಹಿಂದ್ ಫೌಜ’ ಎಂಬ ಸೇನೆಯನ್ನು ಕಟ್ಟಿ “ ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ” ಎಂದು   ಬ್ರಿಟಿಷ್ ಸಾಮ್ರಾಜ್ಯಶಾಹಿ ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ ಆ ಮಹಾನ್ ನಾಯಕನ ಹೆಸರು ‘ನೇತಾಜಿ ಸುಭಾಷ್ ಚಂದ್ರ ಬೋಸ್’. ಸುಭಾಷರು  1897 ರ ಜನವರಿ 23ರಂದು ಒರಿಸ್ಸಾದ ಕಟಕ್ನಲ್ಲಿ ಜನಿಸಿದರು.ಜಲಿಯನ್ ವಾಲಬಾಗ್ನ ದುರಂತ ಸುಭಾಷರಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿತ್ತು. ತಂದೆ ಜಾನಕಿನಾಥ ಬೋಸ್ ಮಗ ಎಲ್ಲಿ ‘ಸ್ವಾತಂತ್ಯ್ರ ಹೋರಾಟ’ ಹಾದಿ ಹಿಡಿದುಬಿಡುತ್ತಾನೋ ಎಂಬ ಚಿಂತೆಯಲ್ಲೇ ಅವರನ್ನು ‘ಐ.ಸಿ.ಎಸ್’ಪರೀಕ್ಷೆ ಬರೆಯಲು ಇಂಗ್ಲೆಂಡ್ಗೆ ಕಳಿಸಿದರು,ಆ ಪರೀಕ್ಷೆಯಲ್ಲಿ 4 ನೆಯವರಾಗಿ ತೇರ್ಗಡೆ ಹೊಂದಿದ ಸುಭಾಷರು ಬ್ರಿಟಿಷ್ ಸರ್ಕಾರದ ಪದವಿಯನ್ನು ನಿರಾಕರಿಸಿ ಸ್ವಾತಂತ್ರ್ಯ  ಚಳುವಳಿಗೆ ಧುಮುಕಿದರು.ಕಾಂಗ್ರೆಸ್ಸ್ ಸೇರಿದ ಕೆಲ ವರ್ಷಗಳಲ್ಲೇ ಮೊದಲ ಸಾಲಿನ ನಾಯಕರಲ್ಲಿ ಒಬ್ಬರಾದರು.  1938ರಲ್ಲಿ ನಡೆದ 51 ನೇ ಹರಿಪುರದ ಕಾಂಗ್ರೆಸ್ಸ್ ಅಧಿವೇಶನ...

ಆಕಸ್ಮಿಕ್ ಭೇಟಿ....

ಇಮೇಜ್
      ಎಲ್ಲವೂ_ಆಕಸ್ಮಿಕ್_ಹಾಗೂ_ತಾತ್ಕಾಲಿಕ್_ಅಲ್ವೇ..??                 ಯಾವುದೋ ಒಂದು ಕಾರಣ ಹೇಳದೆ ಕೇಳದೆ ಬಂದು ಮತ್ತೆ ನನ್ನ ಕನಸುಗಳನ್ನು ಭೇಟಿ ಆಗಿ ಮಾತಾಡಿ, ಅವರಿಗಿಷ್ಟು ಧೈರ್ಯ ಹೇಳಿ ನಾನಿಷ್ಟು ಧೈರ್ಯ ತೆಗೆದುಕೊಂಡು ಬಂದೆ... ಶ್ರೀ ಎಸ್ ಟಿ ಮಿರ್ಗಿ ಗುರುಗಳು ಇ ಬಾಂದವ್ಯ ಮತ್ತೆ ಬಿಸೆದ ಕೊಂಡಿಯಾದರು....                                    ಇಡೀ ಊರಿನಲ್ಲಿ ಮುಂದಿನ 15 ವರ್ಷದ ಸಿಂಧುಗೇರಿ ಇಂದು ನನ್ನ ಹಿಂದಿತ್ತು...  ಸರ ಇನ್ನು ಸ್ವಲ್ಪ ಹೊತ್ತು ಇರಿ.. ಹೋಗ್ಬೇಡಿ ಅನ್ನೋ ಧ್ವನಿ ಈಗಲೂ ನನ್ನ ಕಿವಿಯಲ್ಲಿ ಧ್ವನಿಸುತ್ತಿದೆ...  ಆದ್ರೂ ಮೊನ್ನೆ ಬರುವಾಗ ಅಳು ಮುಖ ನೋಡಿದ್ದೇ..  ಇಂದು ಸ್ವಲ್ಪ ನಗುವನ್ನು ಅವರೆಲ್ಲರ ಮುಖದಲ್ಲಿ ಕಂಡು ಬಂದೆ.                    ಆಕಸ್ಮಿಕ್ ಹಾಗೂ ತಾತ್ಕಾಲಿಕ್ ಭೇಟಿಗಳು ನಮ್ಮ ಮೇಲೆ ನಮ್ಮನ್ನು ಹಚ್ಚಿಕೊ...