ದ್ವಂದ್ವಾದರ್ಶಗಳ ಆಯ್ಕೆ
-- : ದ್ವಂದ್ವಾದರ್ಶಗಳ ಆಯ್ಕೆ :-- ಹಬ್ಬ ಹರಿದಿನಗಳಂದು ಮನೆಯ ಹಿರಿದಾದ ಬಾಗಿಲಿನ ಸೊಬಗನ್ಹೆಚ್ಚಿಸುವ ವಾಸನಾಯೋಗ್ಯ ರಸಸಹಿತ ಮಾವಿನ ಎಲೆಗಳ ತೋರಣದ ಜಾಗವನ್ನು ರಸಹೀನ ಪ್ಲ್ಯಾಸ್ಟಿಕಿನ ತೋರಣ ಬಣ್ಣ ಬಿಂಬಕವಾಗಿ ಜೀವಾಂಶವಿರುವ ಕಣಕ್ಕಿಂತಲೂ ನಿರ್ಜೀವಿ ಕಣ ರಾರಾಜೀಸುತ್ತಿರುವ ಅತ್ಯುನ್ನತ ಕಾಲಘಟ್ಟವಿದು. ತರಕಾರಿ, ದವಸ, ಧಾನ್ಯ, ಹಣ್ಣುಗಳ ಪೋಶಕಾಂಶಗಳಿಂದ ಬಿಡುಗಡೆಯಾಗುವ ಜೀವರಸಕಣವನ್ನು ಹೀರಿ ಬಲಿಷ್ಟವಾಗುವ ಕರುಳ ಬಳ್ಳಿಗಳು ಸಹಿತ ಆಧುನಿಕತೆಯ ಪರಾಕಾಷ್ಠೆಯ ನವ ನೂತನ ಜಂಕ ಸಂಸ್ಕೃತಿಯ ಗೊಬಿ ಮಂಚೂರಿ, ಪಾನಿ ಪುರಿ, ಸ್ನ್ಯಾಕ್ಸ, ಭೆಲ್ ಪೂರಿ ಒಂದೇ ಎರಡೆ ಎಣಿಕೆಗೆ ಸಿಗದಷ್ಟು ಜಂಕಿಗಳ ಮೇಲೆ ವಿಶ್ವಾಸಾರ್ಹತೆ ಬೆಳೆಸಿಕೊಂಡಿವೆ. ಇಲ್ಲಿ ಕರುಳ ಬಳ್ಳಿಯ ತಪ್ಪು ಇಲ್ಲ , ಮನೆಯ ಹೆಬ್ಬಾಗಿಲಿನದು ಇಲ್ಲ ಆದರೆ ಮನೆಯ ಹೆಬ್ಬಾಗಿಲಿಗೆ ಮರದ ಎಲೆಯ ವಾಸನೆ ಇಲ್ಲ. ಕರುಳ ಬಳ್ಳಿಗೆ ತಿನ್ನುವ ಅಗುಳಿನ ಶಕ್ತಿಯ ಅರಿವು ಇಲ್ಲ. ಇನ್ನು ಹಣದ ಸಂಶೋಧನೆಯಾಗದ ಅಂದಿನ ಕೌಟುಂಬಿಕ ವ್ಯವಸ್ಥೆಯಲ್ಲಿ ಮನುಷ್ಯ, ಮಗು, ಹಿರಿಯರು , ಹೆಣ್ಣುಮಕ್ಕಳು ಅಲ್ಲಗಳೆಯಲಾಗದ ಪಾತ್ರ ನಿರ್ಣಯ ಹೊಂದಿದ್ದರಲ್ಲದೆ ಅಳತೆಯ ಮಾನದ...