ಕಿವಿಗಳೆಲ್ಲಾ ಕವಿಗಳಾದಾಗ ಭಾಗ ೧
#ಕಿವಿಗಳೆಲ್ಲಾ_ಕವಿಗಳಾದಾಗ_ಭಾಗ_ಒಂದು 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹 ನನ್ನ ಪ್ರೀತಿಯ ವಿದ್ಯಾರ್ಥಿಗಳೆಲ್ಲಾ ಸರ್ ನೀವು ಹೇಳಿದಂತೆ ಕೇಳುತ್ತೇವೆ, ಯಾವತ್ತೂ ತಪ್ಪು ಮಾಡೋದಿಲ್ಲ, ದಯವಿಟ್ಟು ನಮ್ಮ ಕ್ಲಾಸಿಗೆ ಬನ್ನಿ ಸರ್ ಎಂದು 5 ನೇ ತರಗತಿಯ ಎದುರು ನಿಂತು ಗೋಗರೆದಿದ್ದರು. ಅವರ ಈ ಮಾತಿಗೆ ನಾನೂ ಕೇಳಿಸಿಕೊಂಡರು ಕಿವಿಗೊಡದೆ ಮತ್ತಷ್ಟು ನನ್ನ ಸಿಟ್ಟನ್ನು ಪ್ರದರ್ಶಿಸಿದ್ದೆ. ಅದಕ್ಕೆ ಅವರೆಲ್ಲ ಸೇರಿ ಗೌಂಡಿ ಸಾರ್ ನಮ್ಮ ಕ್ಲಾಸಿಗೆ ಬರುತ್ತಿಲ್ಲ ಎಂದು ಮುಖ್ಯ ಗುರುಗಳಾದ ಕು. ಎಸ್ ಎಸ್ ಎಲಿಬಳ್ಳಿ ಗುರುಗಳಿಗೆ ದೂರು ನೀಡಿದ್ದರು. ನನಗೆ ಬುಲಾವ್ ಬಂತೂ ತುಂಬಿದ ಶಿಕ್ಷಕರ ಸಭೆ ಬಾಡಿದ ನನ್ನ ವಿದ್ಯಾರ್ಥಿಗಳ ಮುಖ ನೋಡಿ ಅಯ್ಯೋ!! ಪಾಪ ವೆನಿಸಿತು, ಆದರೂ ನಾನೂ ನನ್ನ ಸಿಟ್ಟನ್ನು ಬಿಟ್ಟಿರಲಿಲ್ಲ ಸಭೆಯಲ್ಲಿ ಆಫೀಸಿನ ಕೆಲಸದ ಕಾರಣಕ್ಕೆ ನಿಮ್ಮ ತರಗತಿಗೆ ಬರಲು ಆಗಲಿಲ್ಲ ಎಂದು ಏನೇನೋ ವಾದ ಮಾಡಿ ತಪ್ಪು ನನ್ನದಿದ್ದರು ನನ್ನದೆ ಸರಿ ಎನ್ನುವಂತೆ ಮಾತಾಡಿದ್ದೆ,. ವಿದ್ಯಾರ್ಥಿಗಳೆಲ್ಲಾ ಹೀಗೆ ಮಾಡಿದ್ದು ನಾನೂ ಎಷ್ಟು ದಿನ ಅವ್ರ ಕ್ಲಾಸಿಗೆ ಹೋಗುವದನ್ನು ಬಿಟ್ಟಿದ್ದಕ್ಕೆ ಗೊತ್ತೆ ? ಅದು ಒಂದು ವರೆ ದಿನ. ನಾನೂ ಅವ್ರ ಕ್ಲಾಸಿಗೆ ಹೋಗದಿರುವದು ಅವರಿಗೆ ಎಷ್ಟು ನೋವಾಗಿತ್ತೊ ಗೊತ್ತಿಲ್ಲ ಆದರೆ ; ನನಗಂತೂ ಎಂದು ಮೆರೆಯಲಾಗದ ನೆನಪು. ಮುಖ್ಯ ಗುರುಗಳ ಸೂಚನೆಯಂತೆ ಅವರ ಕ್ಲಾಸಿಗೆ...