ಪೋಸ್ಟ್‌ಗಳು

ಮಾರ್ಚ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

#ಹಾರಿಹೋದೈದು ವರುಷಗಳು#

ಇಮೇಜ್
ಹಾರಿಹೋದೈದು ವರುಷಗಳು ಇಂದು ದಿನಾಂಕ 18/03/2021 ಎಂದಾಕ್ಷಣ. ಭೂತಕಾಲದ ಬಹು ಅಮೂಲ್ಯ ಚಿತ್ರಗಳು ಮನಸೆಂಬ ಮರೆಯದ ಮೆಮೊರಿಯಲ್ಲಿ , ಕನಸೆಂಬ ಕರಗದ ಸ್ಟೋರೆಜಿನಲ್ಲಿ , ಮೆದುಳೆಂಬ ಮಹತ್ತರ ಗ್ಯಾರೆಜಿನಲ್ಲಿ ವಿನೋದ, ವಿಷಾದಗಳ ಜಂಟಿ ಧ್ವನಿಯನ್ನು ಒಮ್ಮೆಲೆ ಮಾಡುತ್ತಿವೆ.  ಅದು ಬರೀ ಧ್ವನಿಯಲ್ಲ ನನ್ನ ನಂಬಿದ ಕೆಲವು ಜೀವಗಳ ಹೃದಯರಾಗ, ಹಲವು ಕಂಗಳು ಕಂಪಿಸಿ ಕಂಪಿಸಿ ನಕ್ಕ ಯಾಗ, ನಿಂದಿಸಿ ಮಾತಾಡಿದವರು ಚಪ್ಪಾಳೆ ತಟ್ಟಿ ತಮ್ಮ ಬೆರಳನ್ನು ತಮ್ಮ ಗಲ್ಲದ ಮೇಲೆ ಇಡುವಂತೆ ಮಾಡಿದ ಮಹಾತ್ಯಾಗ. ಒಟ್ಟಿನಲ್ಲಿ ವಿದ್ಯೇಯ ಲೋಕ ತೋರಿದ ತಾಯಿ ತಂದೆಗೆ, ಕಲಿಸಿದ ಗುರುಗಳಿಗೆ, ಪಟ್ಟ ಶ್ರಮಕ್ಕ ಸಿಕ್ಕ ಸೂಕ್ತ ಜಾಗ. ಪ್ರತಿದಿನ ಅಮ್ಮ ಬೆಳಿಗ್ಗೆ ನಾಲ್ಕಕ್ಕೆ ಎದ್ದಾಗ ಟಪ ಟಪ ಎಂದು ಬಡಿಸಿಕೊಂಡ ರೊಟ್ಟಿಗಳೆ. ಅವೆಲ್ಲವನ್ನು ಕೂಡಿಸಿಕೊಂಡು ಬುತ್ತಿಯಾಗಲು ಸಹಕರಿಸಿದ ಬುತ್ತಿಪಾಡುಗಳೆ. ಆ ಬುತ್ತಿಯನ್ನು ತಂದು ನಮಗೆ ತಲುಪಿಸುವ "ಮುನ್ನಾನ" ಟೆಂಪುದ ಡ್ರೈವರುಗಳೆ. ಬುತ್ತಿ ತರಲು ಹೋದಾಗ ಸವೆದ ತಮ್ಮನ ಸರಕಾರಿ ಸೈಕಲಿನ ಟೈರುಗಳೆ. ಬುತ್ತಿ ರೂಮಿಗೆ ತಂದು ತಿನ್ನುವಾಗ ದಾಹ ತೀರಿಸಿದ ರೂಮಿನ ಓನರ ರವರ ಬೋರವೆಲಿನ ನೀರೆ.  ಸಂಜೆ ಮನೆಗೆ ಪೋನ ಮಾಡಲು ಅಂದು ಸಹಕರಿಸಿದ ಕ್ವಾಯಿನ ಬಾಕ್ಸಿನ ಕ್ವಾಯಿನಗಳೇ. ಪಲ್ಯ ಇಲ್ಲದಿದ್ದಾಗ ೨ ರೂಪಾಯಿಗೆ ಲಭ್ಯವಾದ ಗಣಪತಿ ಚೌಕನಲ್ಲಿರುವ ಕಾಮತ ಹೋಟೆಲಿ...

ಮದುವೆಯ ಶುಭಾಶಯಗಳು ಗೆಳೆಯ ನಜೀರಅಹ್ಮದ

ಇಮೇಜ್
ಮದುವೆ :------              ಮೂರು ಪದಗಳ ಮಹಾಕಾವ್ಯ, ಇರ್ವರ ರಾಗಗಳ ಸಮ್ಮಿಲನವಾದರೆ ಶ್ರಾವ್ಯ, ಮನೆಯ ಮನಗಳೆಲ್ಲ ಸೇರಿದರೆ ಭವ್ಯ, ದಿನಕ್ಕೊಂದು ಕ್ಷಣಕ್ಕೊಂದು ಆಸೆಗಳ ನವ್ಯ, ಎಲ್ಲವೂ ಖಾಲಿಯಾದ್ರೂ ಕೊನೆಯಾಗದ ದಿವ್ಯ. ಆತ್ಮೀಯ ಗೆಳೆಯ ನಜೀರಸಾಬ ಅವಟಿ (Co-Operative inspector B.Bagewadi.)                                 ನಿನ್ನ ಮನೋಭಾವ ಅತೀ ಸೌಮ್ಯವಾದುದ್ದು, ನಿನ್ನ ಆಲೋಚನೆಗಳು ತುಂಬಾ ರಮ್ಯವಾದವು, ನಿನ್ನ ವ್ಯಕ್ತಿತ್ವ ಬಹಳ ನಮ್ಯವಾದುದ್ದು. ಇದು ಬಸವಣ್ಣನ ಬಾಗೇವಾಡಿಯಲ್ಲಿ ಜನಿಸಿರುವ ನಿನಗೆ ಅಲ್ಲಿನ ಮಣ್ಣಿನ ಗುಣಗಳು ನಿನ್ನ ಮೈಏರಿವೆ ಎನ್ನುವದರಲ್ಲಿ ಎರಡು ಮಾತಿಲ್ಲ. ತುಂಬಾ ವಿಶಾಲ ಮನೋಧರ್ಮದ ಕೌಟುಂಬಿಕ ವಾತಾವರಣ, ಸ್ನೇಹತತ್ವ ಕ್ಕೆ ಯಾವತ್ತೂ ಬದ್ದರಾಗಿ ಜೋತೆಗಿರುವ ಮಹಾಂತೇಶ ಸರ ಹಾಗೂ ವಿಜಯರವರು ನಿನಗೆ ದಕ್ಕಿರುವ ವರಗಳೇ ನಿಜ. ನೀನು ಕೆಲಸ ಮಾಡುತ್ತಿರುವುದು ಕೂಡಾ ಸಹಕಾರಿ ಇಲಾಖೆ. ಸಹಕಾರ ನಿನ್ನ ಮೂಲ ಮಂತ್ರ ಅದಕ್ಕೆ ಇಷ್ಟೆಲ್ಲಾ ಅನುಕೂಲಗಳನ್ನು ಬೇಡದೆ ಪಡೆದಿರುವುದು ನಿನ್ನ ತಪಸ್ಸೆ ಸರಿ ಗೆಳೆಯ.            "ಮನ್ನತವಿಲ್ಲಾ" ಎಂಬ ಮಹಾಮನೆಯನ್ನು ಕಟ್ಟಿ ತಮ್ಮನಾದ ರಿಯಾಜ ಯಾವ...