ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದ್ವಂದ್ವಾದರ್ಶಗಳ ಆಯ್ಕೆ

ಇಮೇಜ್
               -- : ದ್ವಂದ್ವಾದರ್ಶಗಳ ಆಯ್ಕೆ :-- ಹಬ್ಬ ಹರಿದಿನಗಳಂದು ಮನೆಯ ಹಿರಿದಾದ ಬಾಗಿಲಿನ ಸೊಬಗನ್ಹೆಚ್ಚಿಸುವ ವಾಸನಾಯೋಗ್ಯ ರಸಸಹಿತ ಮಾವಿನ ಎಲೆಗಳ ತೋರಣದ ಜಾಗವನ್ನು ರಸಹೀನ ಪ್ಲ್ಯಾಸ್ಟಿಕಿನ ತೋರಣ ಬಣ್ಣ ಬಿಂಬಕವಾಗಿ ಜೀವಾಂಶವಿರುವ ಕಣಕ್ಕಿಂತಲೂ ನಿರ್ಜೀವಿ ಕಣ ರಾರಾಜೀಸುತ್ತಿರುವ ಅತ್ಯುನ್ನತ ಕಾಲಘಟ್ಟವಿದು.                        ತರಕಾರಿ, ದವಸ, ಧಾನ್ಯ, ಹಣ್ಣುಗಳ ಪೋಶಕಾಂಶಗಳಿಂದ ಬಿಡುಗಡೆಯಾಗುವ ಜೀವರಸಕಣವನ್ನು ಹೀರಿ ಬಲಿಷ್ಟವಾಗುವ ಕರುಳ ಬಳ್ಳಿಗಳು ಸಹಿತ ಆಧುನಿಕತೆಯ ಪರಾಕಾಷ್ಠೆಯ ನವ ನೂತನ ಜಂಕ ಸಂಸ್ಕೃತಿಯ ಗೊಬಿ ಮಂಚೂರಿ, ಪಾನಿ ಪುರಿ, ಸ್ನ್ಯಾಕ್ಸ, ಭೆಲ್ ಪೂರಿ ಒಂದೇ ಎರಡೆ ಎಣಿಕೆಗೆ ಸಿಗದಷ್ಟು ಜಂಕಿಗಳ ಮೇಲೆ ವಿಶ್ವಾಸಾರ್ಹತೆ ಬೆಳೆಸಿಕೊಂಡಿವೆ. ಇಲ್ಲಿ ಕರುಳ ಬಳ್ಳಿಯ ತಪ್ಪು ಇಲ್ಲ , ಮನೆಯ ಹೆಬ್ಬಾಗಿಲಿನದು ಇಲ್ಲ ಆದರೆ ಮನೆಯ ಹೆಬ್ಬಾಗಿಲಿಗೆ ಮರದ ಎಲೆಯ ವಾಸನೆ ಇಲ್ಲ. ಕರುಳ ಬಳ್ಳಿಗೆ ತಿನ್ನುವ ಅಗುಳಿನ ಶಕ್ತಿಯ ಅರಿವು ಇಲ್ಲ.            ಇನ್ನು ಹಣದ ಸಂಶೋಧನೆಯಾಗದ ಅಂದಿನ ಕೌಟುಂಬಿಕ ವ್ಯವಸ್ಥೆಯಲ್ಲಿ ಮನುಷ್ಯ, ಮಗು, ಹಿರಿಯರು , ಹೆಣ್ಣುಮಕ್ಕಳು ಅಲ್ಲಗಳೆಯಲಾಗದ ಪಾತ್ರ ನಿರ್ಣಯ ಹೊಂದಿದ್ದರಲ್ಲದೆ ಅಳತೆಯ ಮಾನದ...

ಕಿಗಳೆಲ್ಲಾ ಕವಿಗಳಾದಾಗ ಭಾಗ ೩

ಇಮೇಜ್
ಕಿವಿಗಳೆಲ್ಲಾ_ಕವಿಗಳಾದಾಗ_ಭಾಗ_ಮೂರು 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹 ಉಪ ಶೀರ್ಷಿಕೆ ::: ಚೇತನ ಆಗು ನೀ ಅನಿಕೇತನ.... ಅವನೊಬ್ಬ ನಾಲ್ಕನೇ ತರಗತಿಯ ವಿದ್ಯಾರ್ಥಿ, ಮೊನ್ನೆ ನನ್ನ ಬಳಿಗೆ ಬಂದು, ಸಾರ್ ನಾನು ನಾಲ್ಕು ಹಾಡು ಬರೆದಿದ್ದೇನೆ ಚೆಕ್ ಮಾಡ್ತೀರಾ ಅಂದ, ನಾನು ಆಯಿತಪ್ಪ ಮಾರಾಯ ನೀನು ಹಾಡು ಬರದಿದ್ದಿಯಾ ಅಂದೆ.. ಅವನು ಆರೇಳು ಬಾರಿ ಮಡಚಿದ 4 ಚೀಟಿಗಳನ್ನು ನನ್ನ ಕೈಗಿತ್ತ,, ಅವುಗಳನ್ನು ಬಿಚ್ಚಿ ನೋಡಿದ ತಕ್ಷಣ ನನಗೆ ಅನಿಸಿದ್ದೇನು ಗೊತ್ತೆ ಸ್ನೇಹಿತರೆ,, ಕನ್ನಡ ಸಾಹಿತ್ಯ ನಿಜವಾಗಿಯು ಜಗತ್ತಿನ ಎಲ್ಲ ಸಾಹಿತ್ಯಗಳಿಗಿಂತಲೂ ಅತ್ಯದ್ಭುತವಾದ ಸಾಹಿತ್ಯ ಅಂತ, ಯಾಕೆಂದರೆ ಜಗತ್ತಿನ ಅತೀ ಚಿಕ್ಕ ಕವಿ ಯಾರು ಇರಬಹುದು ಅನ್ನೋ ಪ್ರೆಶ್ನೆ Google ಗೆ ಕೇಳಿದರೆ ಅದು ಹೇಳಿತು 14 ವರ್ಷದ ಹುಡುಗ ಅಂತ ಅದಕ್ಕೇನು ಗೊತ್ತು ಹೇಳಿ ಸಿಂಧುಗೇರಿಯಲ್ಲಿರೋ ಚೇತನ ಕೇವಲ ಹತ್ತು ವರ್ಷದ ಹಸುಳೆ ಅನ್ನೋದು,,, Google ತಲೆ ಸರಿ ಇಲ್ಲ ಅನ್ನಿಸಿತು, ಅದಕ್ಕೆ ನಿಮಗೆ ಹಾಗೂ ಈ ಜಗತ್ತಿಗೆ ಚೇತನನ್ನು ತೋರಸಬೇಕು ಅನ್ನಿಸಿತು, ಅದಕ್ಕೆ climax ವೀಡಿಯೋ ಬಿಟ್ಟೆ.... ಹತ್ತನೇ ತರಗತಿಗೆ ಬಂದರು ಸರಿಯಾಗಿ ಅಕ್ಷರಗಳೆ ಬರೆಯಲು ಬಾರದ ಹಲವಾರು ವಿದ್ಯಾರ್ಥಿಗಳನ್ನು ನಾನು ಮತ್ತು ನೀವು ನೋಡಿದ್ದೇವೆ. ಅಂತಹುದರಲ್ಲಿ ನಮ್ಮ ಶಾಲೆಯ ನಾಲ್ಕನೆ ತರಗತಿಯ ಹಸುಳೆಯೊಂದು ನಾಲ್ಕು ಕವನ ಬರೆದದ್ದು ನೋಡಿ, ನನ್ನ ...

ಕಿವಿಗಳೆಲ್ಲ_ಕವಿಗಳಾದಾಗ_ಭಾಗ ೨

ಇಮೇಜ್
#ಕಿವಿಗಳೆಲ್ಲ_ಕವಿಗಳಾದಾಗ_ಭಾಗ_ಎರಡು 🌹🌹🌹🌹🌹🌹🌹🌹🌹🌹🌹🌹🌹🌹 ನಾನು ಇದುವರೆಗೂ ಅವರಿಗೆ ನೀಡಿದ ಪ್ರೆಶ್ನೆಗಳು ಈ ಕೆಳಗಿವೆ....       ನನ್ನ (ವಿದ್ಯಾಥಿಯ) 1) ನನ್ನ ಜೀವನದ ಗುರಿ ಏನು ಮತ್ತು ಏಕೆ ? 2) ನನ್ನ ಪ್ರೀತಿಯ ಅಮ್ಮನಿಗಾಗಿ ಎರಡು ಪುಟ ಬರವಣಿಗೆ ? 3) ನಾನು ನನ್ನ ನೆರೆ ಹೊರೆಯವರೊಂದಿಗೆ ಹೇಗಿರಬೇಕು ? ಹಾಗೂ ಅವ್ರು ನನ್ನೊಂದಿಗೆ ಅವ್ರು ಹೇಗಿರಬೇಕು ? 4) ನನ್ನ ಪ್ರಕಾರ ನನ್ನ ಊರು ಹೇಗಿರಬೇಕು ? 5) ನನ್ನ ಶಾಲೆಗೆ ನಾನು ಹೇಗೆ ಕೀರ್ತಿ ತರಬೇಕು ? 6) ನನ್ನ ಪ್ರಕಾರ ನನ್ನ ದೇಶದ ಶಿಕ್ಷಣ ವ್ಯವಸ್ಥೆ ಹೇಗಿರಬೇಕು ? 7) ನನ್ನ ಕುಟುಂಬದ ವಂಶ ವೃಕ್ಷ ಹಾಗೂ ಶಿಕ್ಷಣ ? 8) ನಾನು ಕೆಟ್ಟವನೋ /ಳೋ ಅಥವಾ ಒಳ್ಳಯವನೋ/ ಳೋ ಕಾರಣ ಸಹಿತಿ ವಿವರಣೆ ???? 9) ಜೀವನದಲ್ಲಿ ನೋವು ದುಃಖ ಕಷ್ಟ ಅವಶ್ಯವೇ ? ಏಕೆ ? 10) ಜೀವನದಲ್ಲಿ ಶಾಂತಿ ಸಹನೆ ಪ್ರಾಮಾಣಿಕತೆ ನಂಬಿಕೆಗಳು ಎಷ್ಟು ಪ್ರಮುಖವಾದವುಗಳು ಬರೆಯಿರಿ.. 11) ಮಳೆಗೆ ಮನವಿ ಶೀರ್ಷಿಕೆ ಅಡಿಯಲ್ಲಿ ಕವನ ಬರೆಯಿರಿ ? 12 ) ನಮ್ಮ ಗೆಳೆತನ ಕುರಿತು ಕವನ ಬರೆಯಿರಿ ?.???? ಇಂತಹ ಪ್ರೆಶ್ನೆಗಳಿಗೆ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಉತ್ತರಿಸಬಹುದಾ ಎಂದು ನೀವು ಗಾಬರಿಯಾದರೆ; ಆಶ್ಚರ್ಯವೇನು ಇಲ್ಲ, ಯಾಕೆಂದರೆ ಅವ್ರು ಬರೆಯೋ ಉತ್ತರ ನೋಡಿ ನಿಮಗಿಂತ ಹೆಚ್ಚಿಗೆ ಗಾಬರಿಯಾಗಿದ್ದಕ್ಕೆ ನಾನು ಈ ಲೇಖನ ಬ...

ಕಿವಿಗಳೆಲ್ಲಾ ಕವಿಗಳಾದಾಗ ಭಾಗ ೧

ಇಮೇಜ್
#ಕಿವಿಗಳೆಲ್ಲಾ_ಕವಿಗಳಾದಾಗ_ಭಾಗ_ಒಂದು 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹 ನನ್ನ ಪ್ರೀತಿಯ ವಿದ್ಯಾರ್ಥಿಗಳೆಲ್ಲಾ ಸರ್ ನೀವು ಹೇಳಿದಂತೆ ಕೇಳುತ್ತೇವೆ, ಯಾವತ್ತೂ ತಪ್ಪು ಮಾಡೋದಿಲ್ಲ, ದಯವಿಟ್ಟು ನಮ್ಮ ಕ್ಲಾಸಿಗೆ ಬನ್ನಿ ಸರ್ ಎಂದು 5 ನೇ ತರಗತಿಯ ಎದುರು ನಿಂತು ಗೋಗರೆದಿದ್ದರು. ಅವರ ಈ ಮಾತಿಗೆ ನಾನೂ ಕೇಳಿಸಿಕೊಂಡರು ಕಿವಿಗೊಡದೆ ಮತ್ತಷ್ಟು ನನ್ನ ಸಿಟ್ಟನ್ನು ಪ್ರದರ್ಶಿಸಿದ್ದೆ. ಅದಕ್ಕೆ ಅವರೆಲ್ಲ ಸೇರಿ ಗೌಂಡಿ ಸಾರ್ ನಮ್ಮ ಕ್ಲಾಸಿಗೆ ಬರುತ್ತಿಲ್ಲ ಎಂದು ಮುಖ್ಯ ಗುರುಗಳಾದ ಕು. ಎಸ್ ಎಸ್ ಎಲಿಬಳ್ಳಿ ಗುರುಗಳಿಗೆ ದೂರು ನೀಡಿದ್ದರು. ನನಗೆ ಬುಲಾವ್ ಬಂತೂ ತುಂಬಿದ ಶಿಕ್ಷಕರ ಸಭೆ ಬಾಡಿದ ನನ್ನ ವಿದ್ಯಾರ್ಥಿಗಳ ಮುಖ ನೋಡಿ ಅಯ್ಯೋ!! ಪಾಪ ವೆನಿಸಿತು, ಆದರೂ ನಾನೂ ನನ್ನ ಸಿಟ್ಟನ್ನು ಬಿಟ್ಟಿರಲಿಲ್ಲ ಸಭೆಯಲ್ಲಿ ಆಫೀಸಿನ ಕೆಲಸದ ಕಾರಣಕ್ಕೆ ನಿಮ್ಮ ತರಗತಿಗೆ ಬರಲು ಆಗಲಿಲ್ಲ ಎಂದು ಏನೇನೋ ವಾದ ಮಾಡಿ ತಪ್ಪು ನನ್ನದಿದ್ದರು ನನ್ನದೆ ಸರಿ ಎನ್ನುವಂತೆ ಮಾತಾಡಿದ್ದೆ,. ವಿದ್ಯಾರ್ಥಿಗಳೆಲ್ಲಾ ಹೀಗೆ ಮಾಡಿದ್ದು ನಾನೂ ಎಷ್ಟು ದಿನ ಅವ್ರ ಕ್ಲಾಸಿಗೆ ಹೋಗುವದನ್ನು ಬಿಟ್ಟಿದ್ದಕ್ಕೆ ಗೊತ್ತೆ ? ಅದು ಒಂದು ವರೆ ದಿನ. ನಾನೂ ಅವ್ರ ಕ್ಲಾಸಿಗೆ ಹೋಗದಿರುವದು ಅವರಿಗೆ ಎಷ್ಟು ನೋವಾಗಿತ್ತೊ ಗೊತ್ತಿಲ್ಲ ಆದರೆ ; ನನಗಂತೂ ಎಂದು ಮೆರೆಯಲಾಗದ ನೆನಪು. ಮುಖ್ಯ ಗುರುಗಳ ಸೂಚನೆಯಂತೆ ಅವರ ಕ್ಲಾಸಿಗೆ...

ಛೇ !! ಎಷ್ಟು ದಪ್ಪ ಚರ್ಮಿಗರು ನಾವು....??

ಇಮೇಜ್
ಛೇ !! ಎಷ್ಟು ದಪ್ಪ ಚರ್ಮಿಗರು ನಾವು....??                                       ನಿರ್ವಚನ, ನಿರ್ಲಜ್ಜ, ನಿರ್ದಾಕ್ಷಿಣ್ಯ ನರನಿಗೆ ಏನೆಂದು ಹೇಳಲಿ.? ಅತೀಯಾದ ವೈಜ್ಞಾನಿಕತೆ ಬುಡಕೆ ಕೊಡಲಿ ಪೆಟ್ಟು ಹಾಕುತಿರುವ ಕಾಲದಲ್ಲಿ. ಮನಬಂದಂತೆ ಪರಕುಲಗಳವಧಿಸಿ ಇಂದು ತನ್ನ ತಾನೇ ಸಾವಿನಾಟದ ಸಾಧನವಾಗಿ ನಿಂತಿರುವ ನರನೇ ನೀನು ಸಾವಿನವರೆಗೂ ಕೆತ್ತಿದರೂ ಶಿಲ್ಪವಾಗದ ಜಗದ ಏಕೈಕ ಜೀವಂತ ಕಲ್ಲು ಎಂಬುದನ್ನು ಬಹು ಬೇಗನೆ      ನಿರೂಪಿಸಿ ಬಿಟ್ಟೆ.  "ನಿಸರ್ಗವೇ ನಿಜವಾದ ಸ್ವರ್ಗ" ಎಂಬ ತರ್ಕವಿಲ್ಲದೆ ಮೂರ್ಖ ಮತಿಯಿಂದ ಮರ್ಜಿಗೆ ಬಂದಂತೆ ಮುನ್ನಡೆದ ನಿನ್ನ ಪ್ರತಿ ನಡೆಯು ಕರೆದೊಯ್ಯದದ್ದು ಮಸಣದ ಕಡೆಯೇ ಹೊರತಾಗಿ ಮಲೆನಾಡ ಕಡೆಗಲ್ಲ. ನಿಸರ್ಗದ ಶಿಶುವಾದ ನೀನು, ಶಿಶುವಾಗುವದು ವಿಸ್ಮರಿಸಿ ತಂದೆಯಾಗುವ ಹಂಬಲ ತೋರಿದೆ. ತಂದೆಗೆ ತಂದೆಯಾಗುವ ಧಂದೆ ಮಾಡುತ್ತ ನಂಬಲಾಗದಂತಹ ಶವಯಾನಕ್ಕೆ ಸಾಕ್ಷಿಯಾದೆ. ನಿನ್ನಂತೆ ಹುಟ್ಟಿದ ಕೋಟ್ಯಾಂತರ ಜೀವರಾಶಿಗಳಿಗೆ ನಿನ್ನಷ್ಠೇ ಹಕ್ಕು, ಅಧಿಕಾರ ಈ ಭೂಮಂಡಲದ ಮೇಲಿಹುದೆಂಬುದನ್ನು ಗಾಳಿಗೆ ತೂರಿದೆ. ನಿನ್ನ ತೂರಾಟಕ್ಕೆ ಅಂದು ತಡೆಯೊಡ್ಡಲಾಗದೆ ಹಾರಿ ಹೋದ ಪ್ರತಿ ಜೀವಿಯ ದೇಹದ ಕಣ ಕಣವೂ ಇಂದು ಜೀವತೆಳೆದು ನಯ...

ಮತ್ತೆ ಹಿಡಿದ ಹಾದಿ

ಇಮೇಜ್
#ಬದುಕು #ಬರಹ...... #ಮತ್ತೆ_ಹಿಡಿದ_ಹಾದಿ..                            ಬದುಕಿನ ದಾರಿಯೇ ಹಾಗೆ ಹಲವು ತಿರುವು ಪಡೆದುಕೊಂಡು ಒಂದು ತಾಣಕ್ಕೆ ಬಂದು ನಿಂತೇ ಅನ್ನುವಷ್ಟರಲ್ಲಿ,  ಆ ನೆಲವೇ ಕುಸಿದು ಬಿದ್ದ ಅನುಭವವಾಗುತ್ತದೆ. ಕಾಲು ಕಿತ್ತಿ ಓಡಬೇಕು ಅನ್ನೋವಷ್ಟರಲ್ಲಿ ಆ ಕಾಲಿಗೆ ಅಲ್ಲಿನ ಮಣ್ಣು ಅಂಟಿಕೊಂಡು ಮೈಯೆಲ್ಲ ಆ ನೆಲದ ನಿಯತ್ತು,  ತಾಕತ್ತು ತುಂಬಿ ಬಿಟ್ಟಿರುತ್ತದೆ....       ಆಗ ಕಾಲಿನ ಶಕ್ತಿ ಕಡಿಮೆಯಾಗಿ ಮಣ್ಣು ಜಯ ಸಾಧಿಸುತ್ತದೆ...  ಅದನ್ನು ಮುಂದೆ ಸಾಗುವ ಕಾಲಿಗೆ ತೊಡಕು ಎನ್ನಬೇಕೋ ??  ಕೆಳಗಿದ್ದ ಮಣ್ಣಿಗೆ ಸೋತ ಪ್ರೀತಿ ಎನ್ನಬೇಕೋ?  ತಿಳಿಯುವುದಿಲ್ಲ....       ಆದರೂ #ಆಚಾರ್ಯ_ರಜನೀಶ್ ಹೇಳುವಂತೆ ನಾವು #ಪ್ರೀತಿಯಲ್ಲಿ_ಎದ್ದೇಳಬೇಕು.  #ಬೀಳಬಾರದು....               ಬೀಳುವವರು ಒಂದು ದೇಹಕ್ಕೂ ರೂಪಕ್ಕೋ ಸೋತು ಒಂದು ದಿನ ಅದು ನಿಜವಾದ ಪ್ರೀತಿ ಅಲ್ಲವೇ ಅಲ್ಲ  ಅನ್ನುವು ಅನುಭವ ಆಗುತ್ತದೆ......   ಆದ್ರೆ ಅದೇ ನಿಜವಾದ ಪ್ರೀತಿಯಲ್ಲಿ ಎದ್ದೇಳುವವ,  ತಾನು ತನಗಾಗಿ ಜಪಿಸುವ ಜನರಿಗಾಗಿ ತನ್ನನ್ನು ಮಹಾನ್ ತ್ಯಾಗಿಯನ್ನಾಗಿ ಮಾಡಿಕೊಳ್ಳುತ್ತ ಹೋಗುತ್ತಾನೆ....

ಅಪಘಾತವೆಂಬ ಆಘಾತ

ಇಮೇಜ್
ಅಪಘಾತವೆಂಬ ಅಘಾತ... ಐಚ್ಚಿಕ ಸ್ನಾಯುಗಳು ಅನೈಚ್ಛಿಕತನದಿಂದ ನಿರಾಕಾರ ಮನಸ್ಸಿನ ನಿಶ್ಚಿತ ವಿಶ್ವಾಸ ಮೂಡುತ್ತದೆ. ಕಲ್ಪನಾ ಲೋಕದಲ್ಲಿ ವಿಕಲ್ಪ ಸಂಚರಿಸಿ ಸಕಲ ಸಂಕಲ್ಪವನ್ನು ವಿಕಲ್ಪ ಮಾಡಿಬಿಡುತ್ತದೆ. ನಮ್ಮದೇ ಭಾಗ ನಮಗೆ ಭಾರವಾದಾಗ ಭಾವ ಬಿರಿದು ಜೀವ ಬೆಂಬತ್ತಿ ಬಿಡುತ್ತದೆ. ಮಾಡಿದ ತಪ್ಪು ಮನದಟ್ಟಾದಾಗ ಹಿಂದೆ ತೆಗೆದುಕೊಂಡ ಕೆಟ್ಟ ನಿರ್ಧಾರ ಗಹಗಹಿಸಿ ನಗುತ್ತದೆ. ಅನಿಶ್ಚಿತ ಬದುಕಿನ ಅವ್ಯಾಹತ ಆಲೋಚನೆಗಳಲ್ಲಿ ತೊಡಗಿರುವ ಮಾನವ ಅನಿರೀಕ್ಷಿತ ನಿರ್ದೇಶಕನ ಕೈಯಲ್ಲಿ ನಟಿಸುವ ಸಂಬಳವಿಲ್ಲದ ಪಾತ್ರಧಾರಿ ಅಲ್ಲದೇ ಮತ್ತೇನೂ ಅಲ್ಲ !! ಜೊತೆಗೆ ಹುಟ್ಟಿದವರು, ಜೊತೆಗೆ ನಡೆಯುವವರ ನಿಜ ಬಣ್ಣ ದರ್ಶನವಾದಗಲೇ ಜಗಜಗಿಸುವ ಮುಖದ ನಗುವಿನ ಜಾಗದಲ್ಲಿ ಜಕ್ಕ (ಯಕ್ಷ)ಪ್ರಶ್ನೆಗಳು ಮನೆ ಮಾಡಿ ಮನದ ಬಿರುಕಿಗೆ ದಾರಿ ತೋರುತ್ತವೆ. ಅನಾಥ ಪ್ರಜ್ಞೆಯ ಅಸ್ಪಷ್ಟ ಕೂಗು ಅಕ್ಕರೆಗೆ ಜಾಗವನ್ನು ಆಕ್ರಮಿಸಿಕೊಂಡು ನಮಗೆ ಸತ್ಯದ ದರ್ಶನವನ್ನು ಮಾಡಿಸಿ ಮೌನಕ್ಕೆ ದೂಡುತ್ತದೆ. ಅನಿಶ್ಚಿತ ಜೀವನವೇ ಆದರೂ, ಆಯುಷ್ಯ ಅಲ್ಪವೇ ಆದರೂ, ಅನುಭವಗಳ ಸಂಕಲನ ಮುಖವಾಡವಿಲ್ಲದ ಮುಖಗಳೊಂದಿಗೆ ಹೆಣೆದುಕೊಂಡಷ್ಟು ಮೈಮನಗಳ ಸುಳಿಯಲ್ಲಿ ಮಂದಹಾಸದ ಮಮತೆ ಹರಿದಾಡುತ್ತಿರುವುದೇ ನಿಜಜೀವನ. ಭೌತಿಕ ಜಗತ್ತಿನ ಯಾವ ವಸ್ತುವೂ ಜನ್ಮಜಾತವಾದ ಮಾಯಾ ಮಣ್ಣಿನ ಕಾಯಕ್ಕೆ ಸಮಾನವಾದದ್ದು ಅಲ್ಲ. ಈ ಕಾಯವೇ ದಣಿದಾಗ ಯಾವ ರಾಯನು ಪ್ರಖರ ಪ್ರಾಯ ಮರಳಿ ನೀಡಲಾರ. ...

ಶಾಂತಳಾದ ಶಾಂತವ್ವಕ್ಕ

ಇಮೇಜ್
ಸಾವು ಅನ್ಯಾಯದ ಸಂತಾನವೇ ಹೌದು.. ಅದಕ್ಕೆ ಯಾವುದೇ ನಿರ್ಧಿಷ್ಟ ಒರೆ ಕೊರೆಗಳಿಲ್ಲ. ಅದರ ಅನುಭವ ಜೀವನದ ಕೊನೆಯ ಪಾಠ. ಅದು ಯಂಥ ವೀರನು ಗೆಲ್ಲಲಾಗದ ಆಟ. ಆ ಹುಡುಗುರು ಟಿ ವಿ ನೋಡಾಕ ಬಂದಾವು ಅವರು ಯಾವಾದು ನೋಡತಾರ ಅದನ್ನ ಹಚ್ಚರಿ, ಬರ್ರೀ ಬರ್ರೀ ಅಪ್ಪಿ ಅಲ್ಲಿ ಯಾಕ ಕುಂಡರತೀರಿ ಪಡಸಾಲ್ಯಾಗೇ ಬರ್ರೀ. ಇ ಮಾತುಗಳನ್ನು ಸರಿಸುಮಾರು 18 ವರ್ಷಗಳ ಹಿಂದೆ ನಮಗಾಗಿ ಉಚ್ಚರಿಸಿದ ಕಂಠ ಇಂದು ಉಸಿರಿಲ್ಲದೆ ಅಮರ ಹೆಸರಾಗಿ ಉಳಿಯಿತು. ಶ್ರೀಮತಿ. ಶಾಂತವ್ವ ಸಿದ್ದಪ್ಪ ಮಂಗಾನವರ. ನನಗೆ ವೈಯಕ್ತಿಕವಾಗಿ ಮಾತೃ ಸ್ವರೂಪಿ(ತಾಯಿ ಸಮಾನ). ನಮ್ಮ ಮನೆಯ ಪಕ್ಕದ ಮನೆಯವರು. ನಾವು 6 ನೇ ತರಗತಿಯಲ್ಲಿದ್ದಾಗ ಅವರ ಮನೆಗೆ ಮೂಡಲಮನೆ, ಮುಕ್ತ ಧಾರವಾಹಿಗಳು ಪ್ರಭಾಕರ, ದೇವರಾಜ ಹಾಗೂ ಶಂಕರನಾಗರವರ ಅನೇಕ ಸಿನೇಮಾ ನೋಡಿದ್ದೆ ಕೊಟೆಪ್ಪಗೋಳರವರ (ಮಂಗಾನವರ)ಮನೆಯಲ್ಲಿ. ಇಸು, ಪ್ರಶಾಂತ ತಗೋರಿ ಇವಿಷ್ಟು ಕಡಬು ಮಾಡಿನಿ ಮಶ್ಯಾಕಗ ಶಿರಸುಗ ಎಲ್ಲಾ ಹುಡಗುರಿಗೂ ಕೋಡ್ರಿ ಎಂದು ಸ್ವಂತ ಮಕ್ಕಳ ಸಮಾನ ಕಂಡ ತಾಯಿ ಇಂದು ಅಮರವಾದ ದಿನ ಅತ್ಯಂತ ನೋವಿನ ದಿನ. ಓಣಿಯಲ್ಲಿನ ಎಲ್ಲ ಜನರ ಪ್ರೀತಿಯ ಶಾಂತವ್ವ ಅಕ್ಕ. ಇಂದು ಬೆಳಿಗ್ಗೆ ಓಣಿಗೆ ನಿಸ್ತೇಜಳಾಗಿ ಶವವಾಗಿ ಬಂದಾಗ ಕೆನ್ನೆ ತೊಯದೆ ಇರಲಿಲ್ಲ. ಪ್ರಾಮಾಣಿಕ ವ್ಯಕ್ತಿತ್ವ , ಮುಕ್ತ ಮನಸ್ಸು, ಮುಗ್ದ ಮುಖ ಚಹರೇ, ಕರುಳ ಬಂಧ ಕಟ್ಟುವಂತ ಧ್ವನಿ, ವಿಶಾಲ ವಿಚಾರದ ಮಾತುಗಳು, ಪ್ರೀತಿ , ಮಮತೆ, ಕರುಣೆ, ಔಧಾರ್ಯ, ವಾತ್ಸಲ್ಯ...