RASULASAB GOUNDI PSI...
ಅಂದುಕೊಂಡದ್ದನ್ನೆ_ಸಾಧಿಸಿದ_ಸರದಾರ... ಯಾವುದೇCET_ಕೋಚಿಂಗ_ಇಲ್ಲದೆ_PSI ನಿನ್ನೊಳಗಿನ ನಿನ್ನನ್ನು ನೀನೆಂದು ಮಾರಿಕೊಳ್ಳಬೇಡ. ಏನಾದರೊಂದು ಕಾರಣ ಹೇಳಿ ನಾನು ಎಲ್ಲರಂತೆಯೇ ಎಂದು ಜಾರಿಕೊಳ್ಳಬೇಡ. ಬಡವರ, ನಿರ್ಗತಿಕರ, ನಿರಪರಾಧಿಗಳ ರಕ್ತವೆಂದು ಹೀರಿ ಕೊಳ್ಳಬೇಡ. ಸೊಕ್ಕಿನ ಶ್ರೀಮಂತರು , ಅನೀತಿವಂತರು ನನ್ನವರೆಂದು ಎಂದಿಗೂ ಸಾರಿ ಕೊಳ್ಳ ಬೇಡ. ಸತ್ಯದ ಮಾರ್ಗ ಬಿಟ್ಟು ನಡೆವ ಸ್ನೇಹಿತನಿದ್ದರು ಅವನೊಂದಿಗೆ ಸೇರಿ ಕೊಳ್ಳಬೇಡ. ಜೀವನದ ಚೀಲಕ್ಕೆ ಆಸೆಯ ತೂತು ಹಾಕಿ ಸೊರಿ ಹೋಗಬೇಡ. ಕಾನೂನೇ ನಿನ್ನ ದೈವ. ಸಂವಿಧಾನವೇ ನಿನ್ನ ಧರ್ಮ ಎನ್ನುವುದನ್ನು ಮರೆಯಬೇಡ . ನೀನು ನನ್ನ ತಮ್ಮ ಹತ್ತರೊಂದಿಗೆ ಕೂಡಿ ಹನ್ನೊಂದಾಗಬೇಡ. ಬೇರೊಬ್ಬನಿಗೆ ಉಳಿದು ನೋಡು ಇತಿಹಾಸ ಯಾವತ್ತು ಹಾಡುತ್ತಿರಲಿ ನಿನ್ನದೇ ಹಾಡು. ದಿನ ಬೆಳಗಾದರೆ ಬೇರೆಯವರ ಹೊಲಕ್ಕೆ ಬುತ್ತಿ ಕಟ್ಟಿಕೊಂಡು, ಕುರುಪಿ ಕೈಯಲ್ಲಿ ಹಿಡಿದುಕೊಂಡು, ದುಡಿಯಲು ಹೋಗುವ ಅಮ್ಮ ಅನಕ್ಷರಸ್ಥೆ. ಅಪ್ಪ ಬೇರೆಯವರ ಅಂಗಡಿಯಲ್ಲಿ ಅರುವತ್ತು ರೂಪಾಯಿಗೊಂದು ಪ್ಯಾಂಟ್ ಹೊಲಿಯುವ ಟೈಲರ್. ಅಣ್ಣಾ ಪ್ರಾಥಮಿಕ ಶಾಲೆಯ ಶಿಕ್ಷಕ. ತಂಗಿ ಇನ್ನು ಓದುತ್ತಿರುವ ಹುಡುಗಿ... ಇಂತಹುದರಲ್ಲಿ ಹತ್ತಾರು ಕಡೆ ಅಪ್ಲಿಕೇಷನ್ ಗಳನ್ನು ಹಾಕಿ ಓಡಾಡಿ, ತಿರುಗಾಡಿ ಫೇಲಾಗಿ ಬಂದು ಮನೆಯಲ್ಲಿ ಊಟವಿಲ್ಲದೆ ಬ...