ಛೇ !! ಎಷ್ಟು ದಪ್ಪ ಚರ್ಮಿಗರು ನಾವು....??

ಛೇ !! ಎಷ್ಟು ದಪ್ಪ ಚರ್ಮಿಗರು ನಾವು....??
                     
                ನಿರ್ವಚನ, ನಿರ್ಲಜ್ಜ, ನಿರ್ದಾಕ್ಷಿಣ್ಯ
ನರನಿಗೆ ಏನೆಂದು ಹೇಳಲಿ.?
ಅತೀಯಾದ ವೈಜ್ಞಾನಿಕತೆ ಬುಡಕೆ ಕೊಡಲಿ ಪೆಟ್ಟು ಹಾಕುತಿರುವ ಕಾಲದಲ್ಲಿ.
ಮನಬಂದಂತೆ ಪರಕುಲಗಳವಧಿಸಿ ಇಂದು ತನ್ನ ತಾನೇ ಸಾವಿನಾಟದ ಸಾಧನವಾಗಿ ನಿಂತಿರುವ ನರನೇ ನೀನು ಸಾವಿನವರೆಗೂ ಕೆತ್ತಿದರೂ ಶಿಲ್ಪವಾಗದ ಜಗದ ಏಕೈಕ ಜೀವಂತ ಕಲ್ಲು ಎಂಬುದನ್ನು ಬಹು ಬೇಗನೆ      ನಿರೂಪಿಸಿ ಬಿಟ್ಟೆ. 
"ನಿಸರ್ಗವೇ ನಿಜವಾದ ಸ್ವರ್ಗ" ಎಂಬ ತರ್ಕವಿಲ್ಲದೆ ಮೂರ್ಖ ಮತಿಯಿಂದ ಮರ್ಜಿಗೆ ಬಂದಂತೆ ಮುನ್ನಡೆದ ನಿನ್ನ ಪ್ರತಿ ನಡೆಯು ಕರೆದೊಯ್ಯದದ್ದು ಮಸಣದ ಕಡೆಯೇ ಹೊರತಾಗಿ ಮಲೆನಾಡ ಕಡೆಗಲ್ಲ. ನಿಸರ್ಗದ ಶಿಶುವಾದ ನೀನು, ಶಿಶುವಾಗುವದು ವಿಸ್ಮರಿಸಿ ತಂದೆಯಾಗುವ ಹಂಬಲ ತೋರಿದೆ. ತಂದೆಗೆ ತಂದೆಯಾಗುವ ಧಂದೆ ಮಾಡುತ್ತ ನಂಬಲಾಗದಂತಹ ಶವಯಾನಕ್ಕೆ ಸಾಕ್ಷಿಯಾದೆ.

ನಿನ್ನಂತೆ ಹುಟ್ಟಿದ ಕೋಟ್ಯಾಂತರ ಜೀವರಾಶಿಗಳಿಗೆ ನಿನ್ನಷ್ಠೇ ಹಕ್ಕು, ಅಧಿಕಾರ ಈ ಭೂಮಂಡಲದ ಮೇಲಿಹುದೆಂಬುದನ್ನು ಗಾಳಿಗೆ ತೂರಿದೆ. ನಿನ್ನ ತೂರಾಟಕ್ಕೆ ಅಂದು ತಡೆಯೊಡ್ಡಲಾಗದೆ ಹಾರಿ ಹೋದ ಪ್ರತಿ ಜೀವಿಯ ದೇಹದ ಕಣ ಕಣವೂ ಇಂದು ಜೀವತೆಳೆದು ನಯನೋಗುಪ್ತ ಮಲ್ಲಾಮಲ್ಲಿಗೆ (ಜಟ್ಟಿಗಳ ಯುದ್ಧ) ಆಹ್ವಾನವಿತ್ತಿವೆ.

ನಿನ್ನ ನೀನೆ ಮುಟ್ಟದಂತೆ, ಮುಟ್ಟಿದರೆ ಮಸಣದ ಬಾಗಿಲು ತಟ್ಟಿದಂತೆ, ತಟ್ಟಿದರೆ ನಿನ್ನ ಸಂಕುಲಕೆ ಸೊಂಕುಲವನೇ ಬಳುವಳಿಯಾಗಿ ಬಿಟ್ಟಿದಂತೆ ಮಾಡುವ ಆ ಜೀವಿ ನಿನಗಿಂತ ಎಷ್ಠು ಪಟ್ಟು ಬಲಿಷ್ಠ ಯೋಚಿಸು.?
ಪ್ರತಿದಿನಕ್ಕೆ ೧೫೦,  ವರುಷಕ್ಕೆ ಸರಿ ಸುಮಾರು ೧೦,೦೦೦ ದಿಂದ ೧,೦೦,೦೦೦ ದಷ್ಟು ಜೀವಿಗಳನ್ನಲ್ಲ ಜೀವ ಪ್ರಭೇದಗಳನ್ನು (ಪ್ರಭೇದ ಅಂದರೆ ಹಲವು ಲಕ್ಷಕೋಟಿಜೀವಿಗಳ ಒಂದು ಜಾತಿ ) ಅಳಿವಿನಂಚಿಗೆ ನೂಕಿರುವ ನಿನಗೆ ಇ ಮಹಾಮಾರಿ ಕೊರೋನಾ ವೈರಸ ತುಂಬಾ ಚಿಕ್ಕದಲ್ಲವೇ.?
ಅಷ್ಟು ಜೀವಿಗಳು ತಮ್ಮ
ಜೀವವನ್ನಲ್ಲ ಪ್ರಭೇದವನ್ನುಳಿಸಿಕೊಳ್ಳಲು ಎಷ್ಟು ಹೆಣಗಾಡಿರಬಹುದು ? ಎಷ್ಟು ದೂರ ಹೋಗಿ ಅಡಗಿ ಕುಳಿತರಬಹುದು? ಎಷ್ಟೊಂದು ದು:ಖ ಸಂತಿತಿಗಾಗಿ ಸಹಿಸಿರಬಹುದು ? ಅವುಗಳಿಗೆ ವೈದ್ಯಕೀಯ ಉಪಚಾರವಿತ್ಯೆ ?
ಐಸೋಲೇಷನ್ ವಾರ್ಡಗಳಿದ್ದವೆ ?
ಲಸಿಕೆ ಕಂಡು ಹಿಡಿವ ವಿಜ್ಞಾನಿಗಳ ತಂಡವಿತ್ತೆ. ?
ಲಾಕ್ ಡೌನ ಘೋಸಿಸುವ ಪ್ರಧಾನ ಮಂತ್ರಿಗಳಿದ್ದರೆ ? ಕೈ ಮುಗಿದು ಮನೆಗೆ ಕಳಿಸುವ ಆರಕ್ಷಕರಿದ್ದರೆ ? ಇವರ್ಯಾರು ಇಲ್ಲದಿದ್ದರೂ ತಮ್ಮ ಪಾಡಿಗೆ ತಾವು ಬದುಕುತಿದ್ದ ಅವುಗಳ ಕುಲವಧಿಸಿದ ನಿನಗೆ ದಕ್ಕುತಿರುವ ಅತಿ ಚಿಕ್ಕ ಸನ್ಮಾನವಿದು. 
ಸ್ವೀಕರಿಸು ನರನೆ ನಿನಗೆ ಇ ಚಿಕ್ಕ ಸನ್ಮಾನ ಸ್ವೀಕರಿಸದೆ ವಿಧಿಯಿಲ್ಲ. ಯಾಕೆಂದರೆ ನೀನು ನಿಸರ್ಗ ಜೀವಿಯಾಗಿ ಬದುಕುವ ಯಾವ ಅರ್ಹತೆಯನ್ನು ಹೊಂದಿಲ್ಲ. 

         ಹಣವೆಂಬ ವ್ಯವಹಾರಿಕಾನುಕುಲ ಸಾಧನ ಕಂಡು ಹಿಡಿದು ನಿರಂತರ ಗಳಿಕೆಯ ಕಡೆಗೆ ನಡೆದು ಪ್ರೀತಿ , ಮಮಕಾರ, ಕರುಣೆ, ವಾತ್ಸಲ್ಯ, ದಯೆ ಎಲ್ಲವನ್ನು ನಿನ್ನ ಹಣದ ಷೇರುಪೇಟೆಯಲ್ಲಿ ತೊಡಗಿಸಿಬಿಟ್ಟೆ.
ಇಂದು ಷೇರುಪೇಟೆಯ ಮಾನವಹಂಕಾರದ ಸೂಚ್ಯಾಂಕ ಲೆಕ್ಕವಿಲ್ಲದಷ್ಟು ಏರಿಕೆ ಕಾಣುತ್ತಿದೆ. ಬಾ ಲಾಭವನ್ನು ಗಳಿಸಿಕೊ ಮುಂದೆ ನಿನ್ನ ಹಲವು ಸಂತಿತಿಗಳಿಗೆ ಕೂಡಿಡಲು ಬೇಕಲ್ಲವೇ ?

ಇನ್ನು ನಿನ್ನಲ್ಲಿ ಜಾತಿ, ಧರ್ಮಗಳ ಹಮ್ಮು ಭಿಮ್ಮುಉಳಿದಿವೆ.
ನೋಡು ನಮ್ಮ ನಿಸರ್ಗ ಜನಿತ ಕೊರೋನಾ.
ಜಾತಿ, ದೇಶ, ಲಿಂಗ, ವರ್ಣ ಗಡಿಗಳ ಹಂಗಿಲ್ಲದೆ ತನ್ನ ರುಚಿಯನ್ನು ತೋರಿಸುತ್ತಿದೆ. ಇಂತಹ ಸರ್ವ ಸಮಾನತೆಯ ರುಚಿಯನ್ನು ನಿಸರ್ಗ ಜೀವಿ ಮಾತ್ರ ತೋರಬಹುದಲ್ಲವೇ ? 
                           "ಧರ್ಮವಿಲ್ಲದ ವಿಜ್ಞಾನ ಕುಂಟು, ವಿಜ್ಞಾನವಿಲ್ಲದ ಧರ್ಮ ಕುರುಡು" ಎಂಬ ಜಗದ ಜಾಣ ವಿಜ್ಞಾನಿ ಐನ್‍ಸ್ಟೈನ್ ರ ಮಾತು ಲೆಕ್ಕಕ್ಕೆ ಇಲ್ಲವೇ ?
"ನಿಸರ್ಗವಿರುವುದು ಮನುಜನ ಆಸೆಗಳನ್ನು ಪೂರೈಸಲು ಹೊರತು ದುರಾಸೆಗಳನ್ನಲ್ಲ" ಎಂಬ ಮಾಹಾತ್ಮನ ಮಾತು ಕೇಳಿಸಲಿಲ್ಲವೇ. ? 
ಕೇಳಿಸದ್ದಕ್ಕೆ ಅಲ್ಲವೇ,  ಹಲವು ಪ್ರಾಣಿ, ಪಕ್ಷಿ, ಸಸ್ಯ, ಕ್ರೀಮಿ ಹಾಗೂ ಕೀಟಗಳ ಕೋಟ್ಯಾಂತರ ಜೀವಿಗಳು ನಿನ್ನ ನೀಚ ಸ್ವಾರ್ಥಕ್ಕೆ ಬಲಿಯಾಗಿದ್ದು ?
ಹಲವು ಅಮಾಯಕ ಜೀವಿಗಳನ್ನು ಮನಬಂದಂತೆ ತಿಂದು ಜೀವ ವೈವಿಧ್ಯತೆಯ ಆಹಾರ ಸರಪಳಿಯ ಮತ್ತು ಜಾಲಗಳ ಹಲವು ಕೊಂಡಿಗಳನ್ನು ಕಳಚಿಬಿಟ್ಟೆ. ಕೊರೋನಾದಂತಹ ಪರಾವಲಂಬಿ ವೈರಸಗಳಿಗೆ ಆಶ್ರಯ ನೀಡುವ ಜೀವಸಂತಿಯನ್ನು ನೀನು ಮುಗಿಸಿರಬಹುದು ಅದಕ್ಕೆ ಕೊರೋನಾ ನಿನ್ನಾಶ್ರಯ ನಿನ್ನ ಅನುಮತಿ ಕೇಳದೆ ಪಡೆಯುತ್ತಿರಬಹುದು. 
(ನನ್ನ ಊಹೆ)

ಅದಕ್ಕೆ ತಾನೇ.... 
ನಾನು ಹೇಳುವುದು..
ನಿಸರ್ಗ ನೀಚನಾದ ನರನು ಪಡೆಯಬೇಕಿನ್ನೆನು ?
ವಿಸರ್ಗ ಉಚ್ಚರಿಸದೆ ಪಡುತಿರುವ ಪರಿಯೇನು ?
ತಡೆಯಲಾಗದೆ ಮಾರಿಯನು ತಲುಪುವ ಗುರಿಯೇನು.?
ನರನೇ ಇದುವರೆಗೂ ನಿನ್ಮಾಡಿದ್ದೇಲ್ಲವು ಸರಿಯೇನು?
ಹಲವು ಪ್ರಶ್ನೆಗಳಿಗೆ ತಲೆತಗ್ಗಿಸಿ ನಿಲ್ಲುವ ಮೌನವೇ ನಿನ್ನ ಉತ್ತರವಾದಾಗ ಮಾರಣಹೋಮ ನಡೆಯದೆ ಬೇರೆ ವಿಧಿಯಿಲ್ಲ.
ಇಷ್ಟಾದರೂ, ನಿನ್ನ ಕುಲವೇ ವಿನಾಶದ ಹಾದಿ ಹಿಡಿದರೂ, ಹಲವು ಜನರು ನಿನ್ನ ರಕ್ಷಣೆಗೆ ನಿಂತರೂ, ಬುದ್ಧಿಬರಲಾರದೆಂದಾದರೆ
ಸಾಯುವವರೆಗೂ ಕಟೆದರೂ ಶಿಲೆಯಾಗದ ಏಕೈಕ ಜೀವಂತ ಕಲ್ಲು ನೀನು ಅದಕ್ಕೆ ನಾನು ಹೇಳುವುದು.
ಛೇ !! ಜೀವಿಯಾಗಲು ಎಷ್ಟು ಅನರ್ಹರು ನಾವು ?
ಛೇ !! ಎಷ್ಟು ಪಾಪ ಕರ್ಮಿಗರು ನಾವು ?
ಛೇ !! ಎಷ್ಟು ದಪ್ಪ ಚರ್ಮಿಗರು ನಾವು ?

ಪ್ರಸ್ತುತ ಸಂಧರ್ಭದಲ್ಲಿ ಉತ್ತರ ಕುಮಾರನಾದವನೇ ಉತ್ತಮ ಕುಮಾರ
#Stayathome
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

ಇಂತಿ ನಿಮ್ಮಂತೆ ಬದುಕಲನರ್ಹ ನರ
ಮಶ್ಯಾಕ ಎಮ್ ಗೌಂಡಿ..
ಸಾ // ಯಂಭತ್ನಾಳ..
ದಿ।। ೨೪।೦೩।೨೦೨೦.

ಕಾಮೆಂಟ್‌ಗಳು

  1. Navu prakruthi meli munisidre navu nasa madidastu matra nasha....
    Adre prakruthi nam meli munisidre edi manu kuvale nasha...
    Ega nadithirodu adr.....
    Anna super .........

    ಪ್ರತ್ಯುತ್ತರಅಳಿಸಿ
  2. ಪ್ರಕೃತಿಯ ಜೋತೆ ಹೊಂದಿಕೊಂಡು ಬಾಳಿದರೆ,,,ಮಾತ್ರ ನಮ್ಮ ಉಳಿವು, ಇಲ್ಲವಾದರೆ ಅಳಿವು,,,,,,

    ಪ್ರತ್ಯುತ್ತರಅಳಿಸಿ
  3. ಇದೊಂದು ಅದ್ಭುತವಾದ ಲೇಖನ. ಈ ಲೇಖನದಲ್ಲಿ ಮಾನವ ಮಾಡಿದ ಪಾಪಕೃತ್ಯಗಳ ಪರಾಮರ್ಶನ ಮಾಡಿಕೊಂಡು ಪರಿವರ್ತನೆಗೊಳ್ಳಲು ಹಾಗೂ ಇದ್ದ ಪರಿಸ್ಥಿತಿಯನ್ನು ಸುಧಾರಿಸಲು ಅದರೊಂದಿಗೆ ತನ್ನಂತೆ ಮತ್ತೊಬ್ಬರನ್ನು ಕೂಡಾ ಕಾಪಾಡಿಕೊಂಡು ಕಣ್ಣಿಗೆ ಕಾಣದ, ಹೇಗೆ ಬರುತ್ತದೆ ಎಂಬುದು ಖಚಿತವಾಗಿ ಹೇಳದ ರೋಗದಿಂದ ಜೀವವನ್ನು ಉಳಿಸಿಕೊಳ್ಳಲು ಮತ್ತು ಹಲವು ಜನರು ಹಾಗೂ ಇಲಾಖೆಗಳು ಪಡುತ್ತಿರುವ ಕಷ್ಟದಿಂದ ಮುಕ್ತಗೊಳಿಸಲು ಇನ್ನಾದರೂ ಜನತೆ ಎಚ್ಚೆತ್ತುಕೊಂಡು ಮುಂದುವರಿಯುವಂತೆ ಮಾರ್ಮಿಕವಾಗಿ ಸೂಚಿಸಲಾಗಿದೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿವಿಗಳೆಲ್ಲಾ ಕವಿಗಳಾದಾಗ ಭಾಗ ೧

ಕಿವಿಗಳೆಲ್ಲ_ಕವಿಗಳಾದಾಗ_ಭಾಗ ೨

ಕಿಗಳೆಲ್ಲಾ ಕವಿಗಳಾದಾಗ ಭಾಗ ೩