ಕಿವಿಗಳೆಲ್ಲಾ ಕವಿಗಳಾದಾಗ ಭಾಗ ೧

#ಕಿವಿಗಳೆಲ್ಲಾ_ಕವಿಗಳಾದಾಗ_ಭಾಗ_ಒಂದು 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
ನನ್ನ ಪ್ರೀತಿಯ ವಿದ್ಯಾರ್ಥಿಗಳೆಲ್ಲಾ
ಸರ್ ನೀವು ಹೇಳಿದಂತೆ ಕೇಳುತ್ತೇವೆ, ಯಾವತ್ತೂ ತಪ್ಪು ಮಾಡೋದಿಲ್ಲ, ದಯವಿಟ್ಟು ನಮ್ಮ ಕ್ಲಾಸಿಗೆ ಬನ್ನಿ ಸರ್ ಎಂದು 5 ನೇ ತರಗತಿಯ ಎದುರು ನಿಂತು ಗೋಗರೆದಿದ್ದರು. ಅವರ ಈ ಮಾತಿಗೆ ನಾನೂ ಕೇಳಿಸಿಕೊಂಡರು ಕಿವಿಗೊಡದೆ ಮತ್ತಷ್ಟು ನನ್ನ ಸಿಟ್ಟನ್ನು ಪ್ರದರ್ಶಿಸಿದ್ದೆ. ಅದಕ್ಕೆ ಅವರೆಲ್ಲ ಸೇರಿ ಗೌಂಡಿ ಸಾರ್ ನಮ್ಮ ಕ್ಲಾಸಿಗೆ ಬರುತ್ತಿಲ್ಲ ಎಂದು ಮುಖ್ಯ ಗುರುಗಳಾದ ಕು. ಎಸ್ ಎಸ್ ಎಲಿಬಳ್ಳಿ ಗುರುಗಳಿಗೆ ದೂರು ನೀಡಿದ್ದರು.


ನನಗೆ ಬುಲಾವ್ ಬಂತೂ ತುಂಬಿದ ಶಿಕ್ಷಕರ ಸಭೆ ಬಾಡಿದ ನನ್ನ ವಿದ್ಯಾರ್ಥಿಗಳ ಮುಖ ನೋಡಿ ಅಯ್ಯೋ!! ಪಾಪ ವೆನಿಸಿತು, ಆದರೂ ನಾನೂ ನನ್ನ ಸಿಟ್ಟನ್ನು ಬಿಟ್ಟಿರಲಿಲ್ಲ ಸಭೆಯಲ್ಲಿ ಆಫೀಸಿನ ಕೆಲಸದ ಕಾರಣಕ್ಕೆ ನಿಮ್ಮ ತರಗತಿಗೆ ಬರಲು ಆಗಲಿಲ್ಲ ಎಂದು ಏನೇನೋ ವಾದ ಮಾಡಿ ತಪ್ಪು ನನ್ನದಿದ್ದರು ನನ್ನದೆ ಸರಿ ಎನ್ನುವಂತೆ ಮಾತಾಡಿದ್ದೆ,.

ವಿದ್ಯಾರ್ಥಿಗಳೆಲ್ಲಾ ಹೀಗೆ ಮಾಡಿದ್ದು ನಾನೂ ಎಷ್ಟು ದಿನ ಅವ್ರ ಕ್ಲಾಸಿಗೆ ಹೋಗುವದನ್ನು ಬಿಟ್ಟಿದ್ದಕ್ಕೆ ಗೊತ್ತೆ ? ಅದು ಒಂದು ವರೆ ದಿನ. ನಾನೂ ಅವ್ರ ಕ್ಲಾಸಿಗೆ ಹೋಗದಿರುವದು ಅವರಿಗೆ ಎಷ್ಟು ನೋವಾಗಿತ್ತೊ ಗೊತ್ತಿಲ್ಲ ಆದರೆ ; ನನಗಂತೂ ಎಂದು ಮೆರೆಯಲಾಗದ ನೆನಪು. ಮುಖ್ಯ ಗುರುಗಳ ಸೂಚನೆಯಂತೆ ಅವರ ಕ್ಲಾಸಿಗೆ ಹೋಗೋ ನಿರ್ಧಾರ ಮಾಡಿದ್ದೆ ಆದರೂ ಅವತ್ತು ಹೋಗಲಿಲ್ಲ ಅವ್ರನ್ನೆಲ್ಲ 5 ನೇ ತರಗತಿಗೆ ಕರೆದು ಅವರಿಗೆ  ಕೊಟ್ಟ ಹೊಸ english dictionary ಯಲ್ಲಿ hate, bad, sad, sarrow, angry ಎಂಬಂತಹ ನಕಾರಾತ್ಮಕ ಶಬ್ದಗಳನ್ನು ಹುಡುಕಲು ಹೇಳಿದ್ದು ನನಗೆ ಇನ್ನೂ ನೆನಪಿದೆ.

ಆ ತರಗತಿಯ ಕೊನೆಯೆಲ್ಲಿ ನನ್ನ ಅವತ್ತಿನ  ಭಾವಪರವಶ ಪಾಠಕ್ಕೆ ಅಳಲಾರದವಾರೆಲ್ಲ ಅತ್ತಿದ್ದರು.. ಕೊನೆಗೆ ಸಾಂತ್ವನ ಹೇಳಿ #ನಿಮ್ಮ_ನನ್ನ_ನಡುವೆ_ಯಾಕೆ_ಇ_ಗೊಡವೆ" ಎನ್ನುವ ಕವನ ಬರೆದು ಆ ಭಾವನಾತ್ಮಕ ಸಂಘರ್ಷಕ್ಕೆ ತೆರೆ ಎಳೆದಿದ್ದೆ,.
ಆದರೆ ಆ ಸಂಘರ್ಷದಿಂದ ನಾನು ನೊಂದು ಅಧ್ಬುತವಾದ ವಿಚಾರವನ್ನು ಅರಿತಿದ್ದೆ. ಅದೆನು ಅಂದರೆ,                   #ಛಡಿಯಿಂದ_ವಿದ್ಯಾರ್ಥಿಗಳಲ್ಲಿ_ತರಲಾಗದ_ಬದಲಾವಣೆಯನ್ನು_ಭಾವ_ತೀವ್ರತೆಯ_ಸನ್ನಿವೇಶದಿಂದ_ತರಬಹುದೆಂಬುದನ್ನು"
ಯಾಕೋ ಗೌಂಡಿ ಸರ್ ಈ ಲೇಖನದ ಶೀರ್ಷಿಕೆ ಮರೆತು ಬೇರೇನೆ ಬರೀತಾ ಇದ್ದಾರೆ; ಅಂತಿದ್ದಿರಾ ಸ್ನೇಹಿತರೇ, ಇಲ್ಲ ನಾನೂ ಸರಿಯಾಗೆ ಬರೆಯುತ್ತಿದ್ದೆನೆ, ನೀವು ಸರಿಯಾದದ್ದನ್ನೆ ಓದುತ್ತಿದ್ದಿರಿ....
ವಿದ್ಯಾರ್ಥಿಗಳ ಮತ್ತು ನನ್ನ ಈ ಭಾವನತ್ಮಕ ಸಂಘರ್ಷಕ್ಕೆ ಬಲವಾದ ಕಾರಣ ಇರ್ಲೇ ಬೇಕಲ್ಲವೇ ? ಅದುವೇ ವನ ಮಹೋತ್ಸವದ ವರದಿ ಬರೆಯುವಿಕೆ.

ದಿನಾಂಕ 8/7/2017 ರಂದು ನಾವು ಊರಿನ ಹತ್ತಿರದ ಚನ್ನಮ್ಮಆಯಿ ಗುಡಿಗೆ ವನಮಹೋತ್ಸವಕ್ಕೆ; ಹೋಗಿದ್ದೆವು. ಅಲ್ಲಿ 4 ಜನ ಶಿಕ್ಷಕರು 40 ಜನ ವಿದ್ಯಾರ್ಥಿಗಳನ್ನು 4  ಗುಂಪು ಮಾಡಿ ಆಟ ಅಡಿ ಹಲವಾರು ರೀತಿಯ ಗಿಡ, ಮರ, ಎಲೆ, ಹಣ್ಣು, ಕಲ್ಲು, ಮಣ್ಣುಗಳ ಬಗ್ಗೆ ಪರಿಕಲ್ಪನೆ ನೀಡಿದ್ದೆವು.
 4 ಗುಂಪುಗಳು ನೃತ್ಯ ಪ್ರದರ್ಶನ ಮಾಡಿದ್ದೆವು.  ಎಲ್ಲಾರು ಸೇರಿ ಸಾಮೂಹಿಕ ಊಟ ಸವಿದೆವು ಸಂಜೆ 7 ಕ್ಕೆ ಶಾಲೆಗೆ ತಲುಪಿದೆವು. ನಂತರ ಎಲ್ಲ ವಿದ್ಯಾರ್ಥಿಗಳಿಗೆ ನಾನೊಂದು ಮಾತು ಹೇಳಿದೆ ನಾಳೆ ಬರುವಾಗ ಎಲ್ಲಾರೂ ವನ ಮಹೋತ್ಸವದ ವರದಿಯನ್ನು ಬರೆದುಕೊಂಡು ಬನ್ನಿ ಎಂದು ಹೇಳಿದ್ದೆ.

ಅದಕ್ಕೆ ತಲೆಬಾಗಿ ನಗುನಗುತಾ ಮನೆಗೆ ಹೋದ ವಿದ್ಯಾರ್ಥಿಗಳು ಮರು ದಿನ ನಾನೂ ತುಂಬಾ ಉತ್ಸಾಹದಿಂದ ವಿದ್ಯಾರ್ಥಿಗಳ ವರದಿ ಚೆಕ್ ಮಾಡಬೆಕೆಂದು. ಹೊಸ ಕೆಂಪು ಪೆನ್ನು ತೆಗೆದುಕೊಂಡು ಹೋದರೆ ಅಲ್ಲಿ ನನ್ನ ಕೆಂಪು ಪೆನ್ನಿನ ಮಸಿಗೆ ಕೆಲಸವಿರಲಿಲ್ಲ. ಅಂದರೆ ಹಲವಾರು ವಿದ್ಯಾರ್ಥಿಗಳು ವರದಿ ಬರೆದಿದ್ದೆ ಇಲ್ಲ. ನನಗಾಗ ಬಂದ ಸಿಟ್ಟನ್ನು ನಾನೆ ತಡೆದುಕೊಂಡು ತರಗತಿಯಿಂದ ಎದ್ದು ಹೊರ ಬಂದಿದ್ದೆ.  ಹೊರ ಹೋದ ನಂತರ ತರಗತಿಗೆ ಹೋಗಿರಲಿಲ್ಲ. 

ಮರುದಿನ ವಿದ್ಯಾರ್ಥಿಗಳೆಲ್ಲಾ ಸರ್ ನೀವು ಹೇಳಿದಂತೆ ಕೇಳುತ್ತೇವೆ ಯಾವತ್ತೂ ತಪ್ಪು ಮಾಡೋದಿಲ್ಲ, ದಯವಿಟ್ಟು ನಮ್ಮ ಕ್ಲಾಸಿಗೆ ಬನ್ನಿ ಸರ್ ಎಂದು 5 ನೇ ತರಗತೀಯ ಎದುರು ನಿಂತೂ ಗೋಗರೆದಿದ್ದರು. ನಂತರ ಏನಾಯಿತು ಎಂದು ನೀವು ಈಗಾಗಲೆ ಓದಿದ್ದಿರಿ,..

ಎಷ್ಟೇ ಆದರೂ ಅವರು  ನನ್ನ ವಿದ್ಯಾರ್ಥಿಗಳಲ್ಲವೇ ? ಅದಕ್ಕೆ ಸಿಟ್ಟಿನಿಂದಲೆ ಅವರ ತರಗತಿಗೆ ಹೋದೆ, ನನ್ನ ಸಿಟ್ಟನ್ನು ಶಿಕ್ಷೆಯಾಗಿ ಮಾಡಬೇಕು ಎಂದು ವಿಚಾರ ಮಾಡಿ ಅವರು ನಮ್ಮ ಶಾಲೆಯಲ್ಲಿ ಇರೋವೆರೆಗೂ ಹಾಗೂ ಬಯಸಿದರೆ ಮುಂದೆಯು ಆ ಶಿಕ್ಷೆ ಕೋಡಬೇಕು ಅಂದುಕೊಂಡೆ.
 ಅದುವೇ ಪ್ರತಿ ವಾರ ಅವರಿಗೆ ಬರೆಯಲು ಹೇಳುವ 2 ನೈತಿಕ ಪ್ರೆಶ್ನೆಗಳು. ವನಮಹೋತ್ಸವದ ವರದಿ ಬರೆಯದ ತಪ್ಪಿಗೆ ಪ್ರತಿವಾನರ 2; ಪ್ರೆಶ್ನೆಗಳನ್ನು ಕೊಡೋ ನಿರ್ಧಾರ ನಾನು ಮಾಡಿದ್ದೆ ಬರೆಯೋ ಉತ್ಸಾಹದಲ್ಲಿ ಅವರಿದ್ದರು.

ಬರೆವಣಿಗೆಯನ್ನೇ ಯಾಕೆ ಶಿಕ್ಷೆಯಾಗಿ ಕೋಡಬೇಕು ಅಂದುಕೊಂಡೆನೆಂದರೇ. ಶಿಕ್ಷಕರಾದ ನಾವೆಲ್ಲ ಸಾಮಾನ್ಯವಾಗಿ ತರಗತಿಯಲ್ಲಿ ಪ್ರಶ್ನೇಗಳಿಗೆ ಉತ್ತರ ಹೇಳುವ ಹಾಗೂ ಅಂದವಾಗಿ ಅಕ್ಷರ ಬರೆಯುವವರೇ ಜಾಣರೆಂದು  ನಿರ್ಧಾರ
 ಮಾಡಿ ಬಿಡುತ್ತೇವೆ.  ಸ್ವಂತ ಅಭಿವ್ಯಕ್ತಿ ಮಾಡುವ ಸಾಮಾರ್ಥ್ಯದ ಕುರಿತು ಯೋಚಿಸುವದಿಲ್ಲ,.. ಅದಕ್ಕೆ ನನಗನಿಸಿದ್ದು ಏನೆಂದರೆ ನನ್ನ ತರಗತಿಯಲ್ಲಿ ಕೇಳಿದ ಪಾಠದಲ್ಲಿ ವಿದ್ಯಾರ್ಥಿಗಳು 4 ಪ್ರಶ್ನೆಗಳಿಗೆ ಉತ್ತರ ಹೇಳದಿದ್ದರೆ, ಬರೆಯದಿದ್ದರೆ , ಪರ್ವಾಗಿಲ್ಲ ಆದರೆ, ತಮ್ಮ ಮನಸಿನ ನಾಲ್ಕು ವಿಚಾರಗಳನ್ನು ಪುಟಕ್ಕೆ ಇಳಿಸಲು ಬಾರದಿದ್ದರೆ ಅದು ಸರ್ವನಾಶ ಎನಿಸಿತು. 

ಪ್ರತಿ ಶನಿವಾರ 2 ಪ್ರೆಶ್ನೆ ನಿಡುತ್ತಿದ್ದೇನೆ,, ಇಲ್ಲಿಯವೆರೆಗೂ ನೀಡಿದ ಕೆಲವು ಪ್ರೆಶ್ನೆಗಳು.....
 ಹೇಗಿರ ಬಹುದು ಕಮೆಂಟ ಮಾಡಿ ನೋಡೋಣ ???????
 ಭಾಗ ೨ ಬರುತ್ತೆ ತಪ್ಪದೆ ನೊಡಿ...
                         ಇಂತಿ 
         ಎಮ್  ಜಿ ಸರ್ ..
             ಸಾ ।। ಯಂಭತ್ನಾಳ..
                      ೨೦೧೭

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿವಿಗಳೆಲ್ಲ_ಕವಿಗಳಾದಾಗ_ಭಾಗ ೨

ಕಿಗಳೆಲ್ಲಾ ಕವಿಗಳಾದಾಗ ಭಾಗ ೩