#ಹಾರಿಹೋದೈದು ವರುಷಗಳು#
ಹಾರಿಹೋದೈದು ವರುಷಗಳು
ಇಂದು ದಿನಾಂಕ 18/03/2021 ಎಂದಾಕ್ಷಣ.
ಭೂತಕಾಲದ ಬಹು ಅಮೂಲ್ಯ ಚಿತ್ರಗಳು ಮನಸೆಂಬ ಮರೆಯದ ಮೆಮೊರಿಯಲ್ಲಿ , ಕನಸೆಂಬ ಕರಗದ ಸ್ಟೋರೆಜಿನಲ್ಲಿ , ಮೆದುಳೆಂಬ ಮಹತ್ತರ ಗ್ಯಾರೆಜಿನಲ್ಲಿ ವಿನೋದ, ವಿಷಾದಗಳ ಜಂಟಿ ಧ್ವನಿಯನ್ನು ಒಮ್ಮೆಲೆ ಮಾಡುತ್ತಿವೆ.
ಅದು ಬರೀ ಧ್ವನಿಯಲ್ಲ ನನ್ನ ನಂಬಿದ ಕೆಲವು ಜೀವಗಳ ಹೃದಯರಾಗ, ಹಲವು ಕಂಗಳು ಕಂಪಿಸಿ ಕಂಪಿಸಿ ನಕ್ಕ ಯಾಗ, ನಿಂದಿಸಿ ಮಾತಾಡಿದವರು ಚಪ್ಪಾಳೆ ತಟ್ಟಿ ತಮ್ಮ ಬೆರಳನ್ನು ತಮ್ಮ ಗಲ್ಲದ ಮೇಲೆ ಇಡುವಂತೆ ಮಾಡಿದ ಮಹಾತ್ಯಾಗ.
ಒಟ್ಟಿನಲ್ಲಿ ವಿದ್ಯೇಯ ಲೋಕ ತೋರಿದ ತಾಯಿ ತಂದೆಗೆ, ಕಲಿಸಿದ ಗುರುಗಳಿಗೆ, ಪಟ್ಟ ಶ್ರಮಕ್ಕ ಸಿಕ್ಕ ಸೂಕ್ತ ಜಾಗ.
ಪ್ರತಿದಿನ ಅಮ್ಮ ಬೆಳಿಗ್ಗೆ ನಾಲ್ಕಕ್ಕೆ ಎದ್ದಾಗ ಟಪ ಟಪ ಎಂದು ಬಡಿಸಿಕೊಂಡ ರೊಟ್ಟಿಗಳೆ. ಅವೆಲ್ಲವನ್ನು ಕೂಡಿಸಿಕೊಂಡು ಬುತ್ತಿಯಾಗಲು ಸಹಕರಿಸಿದ ಬುತ್ತಿಪಾಡುಗಳೆ. ಆ ಬುತ್ತಿಯನ್ನು ತಂದು ನಮಗೆ ತಲುಪಿಸುವ "ಮುನ್ನಾನ" ಟೆಂಪುದ ಡ್ರೈವರುಗಳೆ.
ಬುತ್ತಿ ತರಲು ಹೋದಾಗ ಸವೆದ ತಮ್ಮನ ಸರಕಾರಿ ಸೈಕಲಿನ ಟೈರುಗಳೆ. ಬುತ್ತಿ ರೂಮಿಗೆ ತಂದು ತಿನ್ನುವಾಗ ದಾಹ ತೀರಿಸಿದ ರೂಮಿನ ಓನರ ರವರ ಬೋರವೆಲಿನ ನೀರೆ.
ಸಂಜೆ ಮನೆಗೆ ಪೋನ ಮಾಡಲು ಅಂದು ಸಹಕರಿಸಿದ ಕ್ವಾಯಿನ ಬಾಕ್ಸಿನ ಕ್ವಾಯಿನಗಳೇ.
ಪಲ್ಯ ಇಲ್ಲದಿದ್ದಾಗ ೨ ರೂಪಾಯಿಗೆ ಲಭ್ಯವಾದ ಗಣಪತಿ ಚೌಕನಲ್ಲಿರುವ ಕಾಮತ ಹೋಟೆಲಿನ ಸಾಂಬಾರುಗಳೇ. ಬುತ್ತಿ ತಪ್ಪಿದಾಗ ಮೂರು ರೂಪಾಯಿಗೆ ಪಾವ ಸಿಗುತ್ತಿದ್ದ ಶೆಂಗಾದ ಕಾಳುಗಳೆ.
ಹೀಗೆ ನೆನಪಿನ ಬುತ್ತಿ ತೆರೆದಷ್ಟು ಮುಗಿಯದೆ ಉಳಿಯುವ ಕೋಟಿ ಕೋಟಿ ಬಾರಿ ಉಪಕಾರಿಯಾದ ಸಜೀವ ಹಾಗೂ ನಿರ್ಜೀವ ವಸ್ತುಗಳೇ ನಿಮಗೆ ತುಂಬಾ ಥ್ಯಾಂಕ್ಸ ಕಣ್ರೋ. ಇ ಐದೊರುಷಗಳಲ್ಲಿ ನಿಮ್ಮನ್ನು ಬಿಟ್ಟಿದ್ದೆನೆ ಆದರೆ ಮರೆತಿಲ್ಲ ಕಣ್ರೋ.......
ಡಿ.ಎಡ್. ಮುಗಿದಾಗ ಬಹಳ ಜನ ಆಟೊಗ್ರಾಫ್ ಬರೆಸಿಕೊಂಡರು ಅದರಲ್ಲಿ ನಿಮ್ಮಿಷ್ಟದ ಆಹಾರ ಅಂತ ಖಾಲಿ ಜಾಗವಿತ್ತು... ನಾನಂತೂ ಬರೆದದ್ದೂ ಒಂದೇ..
ಅದೇನು ಅಂತೀರಾ .. ?
"ಕಟಿ ಜೋಳದ ರೊಟ್ಟಿ ಮತ್ತ ಮಸಾಲಿ ಖಾರಾ" ಅಂತಾ ಯಾಕೆಂದರೆ.. ಅದು ನನ್ನ ಜೋತೆಗಿದ್ದಷ್ಟು ದಿನ ಬೇರೆ ಯಾರೂ ಇಲ್ಲ. ಬೇರೆ ಯಾವುದೂ ಇಲ್ಲ. ಹೊಸ ಅಂಗಿ ಬಂದಾಗ ಹಳೆ ಅಂಗಿನಾ ಮರೆತು ಬಿಡ್ತೀವಿ ಅದ್ರೆ ಹಾಗಾಗಬಾರದಲ್ಲ. ನಾನು ಮತ್ತು ನನ್ನಂಥ ಮಾರ್ಗದಲ್ಲಿ ಹಾದು ಬಂದೊರು ಮರೆಯೊದು ಹೇಗೆ ಸಾಧ್ಯ.?
ಇಷ್ಟೆಲ್ಲಾ ಆಗಿ ಆ ಪುಸ್ತಕ, ಇ ನೋಟ್ಸು, ಆ ಕ್ವೆಶನ ಪೇಪರು, ಆ ಆಪ್ಶನ್ನು ,ರಾತ್ರಿಯ ಓದು ಗೆಳೆಯರೊಂದಿಗೆ ಚರ್ಚೆ, ನೇಮಕಾತಿ ಅಧಿಸೂಚನೆ, ಹುದ್ದೆಗಳ ವರ್ಗೀಕರಣ, ಜಿಲ್ಲಾವಾರು ಹುದ್ದೆ ಅರ್ಜಿ ಹಾಕೊದು, ಎಕ್ಸಾಮ ಬರೆಯೋದು, ಕೀ ಆನ್ಸರ ಚೆಕ್ ಮಾಡೊದು, ಮತ್ತೆ ರಿವೈಜ್ ಕೀ, ಮತ್ತೆ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಜಿಲ್ಲೆಗೆ ಮೊದಲ ಸ್ಥಾನ ನೇಮಕಾತಿ
ಕೌನ್ಸಿಲಿಂಗನಲ್ಲಿ ಶಾಲೆಯ ಆಯ್ಕೆ. ಡಿ ಡಿ ಆಫಿಸಿನಿಂದ ಚಾಲನಾ ಆದೇಶ, ಕೊನೆಗೆ ಬಾಗೇವಾಡಿ ಬಿ ಇ ಓ ಆಫಿಸಿನಿಂದ ನೇಮಕಾತಿ ಆದೇಶ..
ಅಲ್ಲಿಂದ ಮಾಮಾನ ಬೈಕನಲ್ಲಿ ಅಪ್ಪ ನಾನು ಸೇರಿ ಪ್ರಯಾಣ ಮೊದಲು ಯಂಭತ್ನಾಳದಿಂದ ನೇಗಿನಾಳ, ಮುಳ್ಳಾಳ, ಬೊಮ್ಮನಹಳ್ಳಿ ಮಾರ್ಕಪ್ಪನಹಳ್ಳಿ, ಸಾತಿಹಾಳ ಕ್ರಾಸ ಮುಂದೆ ಬೈರವಾಡಗಿ, ಯಾಳವಾರ ಕಡಕೋಳ, ಅಡವಿ ನಂದಿಹಾಳ, ಶರಣ ಸೋಮನಾಳ ಮುಂದೆ ಸಿಂಧುಗೇರಿ ಶಾಲೆಗೆ ಹೋಗಿ ಸೇವೆಗೆ ಸೇರಿ (18/03/2016) ಇಂದಿಗೆ ಬರೋಬ್ಬರಿ 5 ವರ್ಷಗಳಾದವು.
ಬೆಳೆಸಿ,
ಕಲಿಸುವದ ಕಲಿಸಿ,
ನಗಿಸಿ.
ಅಳಿಸಿ ಹಲವುಗಳ,
ಕೊರತೆ ಮರೆಸಿ.
ಜವಾಬ್ದಾರಿಯ ಭಾರ ಎಳೆಯಲು ಎತ್ತು ಮಾಡಿಬಿಟ್ಟವಿಐದು ವರುಷಗಳು....
ಅದಕ್ಕೆ ಕಾರಣ ನಮ್ಮ ನೌಕ್ರೇಪ್ಪ
ಅತ್ತಿತ್ತ ಹೋಗದಂತೆ
ಚಿತ್ತಬಿಟ್ಟು ನೊಡದಂತೆ
ಮತ್ತೆ ಮತ್ತೆ ಸಂಸಾರ ಎನ್ನುವಂತೆ
ಮಾಡಿಬಿಟ್ಟವಿಐದು ವರುಷಗಳು..
ಹತ್ತಿರವಿದ್ದ ಗೆಳೆತನ.
ಸ್ವಲ್ಪ ದೂರವಿದ್ದು ಬಂದಿತು ಹಿರಿತನ.
ಏನೇ ಆದರೂ ನಮ್ಮ ನೌಕರಿ ಮರೆಸಿತಲ್ಲ
ಅಪ್ಪ ಅಮ್ಮ ಎಂದು ಮರೆಯಲಾಗದ ಬಡತನ.
ಡಿಯರ ಸರ್ಕಾರಿ ನೌಕ್ರೇಪ್ಪ
೫ ವರುಷದಾಗ ನಿನ್ನ ಮರ್ಮ ತೋರಿಸಿದ್ದಿ.
ಭಾಳ ಭಾಳ ಥ್ಯಾಂಕ್ಸ ಎಪ್ಪ.. ಡಿಯರ ಸರ್ಕಾರಿ ನೌಕ್ರೇಪ್ಪ...
ನಾಕಮಂದ್ಯಾಗ ತಲಿ ಎತ್ಕೊಂಡು ತಿರಗ್ಯಾಡಾಂಗ. ನಮಸ್ಕಾರೀ ಮಾಸ್ತರ/ ಸರ್ ಅನ್ನಾಂಗ ಮಾಡಿದ್ದೆ ಡಿಯರ ಸರ್ಕಾರಿ ನೌಕ್ರೇಪ್ಪ.
ನಿನಗ ತುಂಬಾ ತುಂಬಾ ಥ್ಯಾಂಕ್ಸಪ್ಪ...
ಎಷ್ಟು ಹಾಡಿ ಹೋಗಳಿದರೂ ಮುಗಿಯದು
ನಮಗೆ ನಮ್ಮ ನೌಕರಿ ಕೊಟ್ಟ ಸ್ಥಾನ.
ಕೊನೆಗೆ "ನಮ್ಮ ನೌಕರಿಗೆ ಮೂಲ ಕರ್ತೃಗಳಾದ
ನಮಗೆ ನಮ್ಮ ಮನೆಯವರಿಗೆ ಇವತ್ತಿಗೂ ಅನ್ನ ಹಾಕುತ್ತಿರುವ ಧಣಿಗಳಾದ" ಎಲ್ಲ ಶಾಲಾ ಮಕ್ಕಳಿಗೆ
ಸಾವಿರ ಕೋಟಿ ಧನ್ಯವಾದಗಳು.
ಮುಗಿದ ಐದು ವರ್ಷಗಳಲ್ಲಿ ಬಹಳ ಬದಲಾಯಿತು.
ಅದರೇ ಮನಸ್ಸು ಸೇವೆಗೆ ಸೇರಿದ ದಿನದಷ್ಟೆ ಹೊಸತು.

ಶಿಕ್ಷಕರಾಯ್ಕೆಪಟ್ಟಿಯಲ್ಲಿ, ಮೊದಲ ಜಾಗದಲ್ಲಿ ಹೆಸರು ನೋಡಿದಂದಿನ ಖುಷಿಗೆ ಬೇರೆನಾದರೂ ಸಮಉಂಟೆ ?
ಕಣ್ಣಂಚಲಿ ಮಿಂಚಿ ಹೋದ ಎರಡು ಹನಿಗಳು
ಭೂತದ ಚಿತ್ರಗಳನ್ನು ಅಪ್ಪ, ಅಮ್ಮ, ನಾನು ಮರೆವುದೆಂಟೆ. ?
ಎಲ್ಲ ನೆನಪಿಸುತಲೇ ಹಾರಿಹೋದೈದೊರುಷಗಳು...
ಸರಕಾರಿ ನೌಕರಿಯೆಂಬ ಸಾಮಾಜೀಕ ಬದುಕಿನ
ಬಹು ಕಿಮ್ಮತ್ತಿನ ಗೆಳೆಯ ನಮ್ಮ ಕಿಸೆಗಿಳಿದ ಕ್ಷಣ
ಕೌಟುಂಬಿಕ ಹಿನ್ನಲೆಯನ್ನು ಬದಲಾಯಿಸಿ
ಅದೃಷ್ಟವನ್ನೆ ಕುಲಾಯಿಸಿ ಇನ್ನು
ಮುನ್ನಡೆಸುತ್ತುರುವ ಮಹನೀಯ.
ಎಲ್ಲ ನೆನಪಿಸುತಲೇ ಹಾರಿಹೋದೈದೊರುಷಗಳು...
ಸೇರಿದ ಶಾಲೆಯ ಮಕ್ಕಳಿಗೆ ಸಾಧ್ಯವಾದಷ್ಟು ಒಳಿತನ್ನೆ ಯೋಚಿಸಿದ ಮನ ಅದನ್ನೇ ಮಾಡಿತು ಕೂಡಾ.
ಇ ಸರಕಾರಿ ನೌಕರಿ ಅನ್ನೋದು ಕುಟುಂಬಕ್ಕೆ
ಎಲ್ಲಿಲ್ಲದ ಭದ್ರತೆ ಕೊಟ್ಟಿತು.
ಸಾಮಾಜೀಕವಾಗಿ ವಿಶೇಷ ಸ್ಥಾನ ಮಾನ ಕೊಟ್ಟಿತು.

ಡಿಯರ ವಿದ್ಯಾರ್ಥಿಗಳೇ ನಿವಂದ್ರೆ ನನಗೆ ತುಂಬಾ ಪ್ರೀತಿ. ಕಳೆದೈದು ವರುಷಗಳಲ್ಲಿ ನನ್ನ ವ್ಯಕ್ತಿತ್ವದಲ್ಲಿ ನನಗೆ ಅರಿವಿಲ್ಲದಂತೆ ಅತೀಯಾದ ಕರುಣೆ ಹಾಗೂ ಸಹನೆಯನ್ನು ತುಂಬಿದ ನಿಮಗೆ ನಾನು ಯಾವತ್ತೂ ಋಣಿ.
ಮಶ್ಯಾಕ ಎಮ್ ಜಿ....
(೫ ವರ್ಷದ ಮಾಸ್ತರ)
ಸಾ॥ ಯಂಭತ್ನಾಳ...
(೫ ವರ್ಷದ ಮಾಸ್ತರ)
ಸಾ॥ ಯಂಭತ್ನಾಳ...
ನೆನಪಿನ ಅಂಗಳದಲ್ಲಿ ಅವಿಸ್ಮರಣೀಯ ಐದು ವರ್ಷಗಳ ಸವಿನೆನಪುಗಳು.
ಪ್ರತ್ಯುತ್ತರಅಳಿಸಿThank u broo
ಅಳಿಸಿ