ಮದುವೆಯ ಶುಭಾಶಯಗಳು ಗೆಳೆಯ ನಜೀರಅಹ್ಮದ
ಮದುವೆ :------
ಮೂರು ಪದಗಳ ಮಹಾಕಾವ್ಯ,
ಇರ್ವರ ರಾಗಗಳ ಸಮ್ಮಿಲನವಾದರೆ ಶ್ರಾವ್ಯ,
ಮನೆಯ ಮನಗಳೆಲ್ಲ ಸೇರಿದರೆ ಭವ್ಯ,
ದಿನಕ್ಕೊಂದು ಕ್ಷಣಕ್ಕೊಂದು ಆಸೆಗಳ ನವ್ಯ,
ಎಲ್ಲವೂ ಖಾಲಿಯಾದ್ರೂ ಕೊನೆಯಾಗದ ದಿವ್ಯ.
ಇ ಎಲ್ಲಾ ಆನಂದಮಯ ಬದುಕಿನಲ್ಲಿ ಮದುವೆಯೊಂದು ಬಹುದೊಡ್ಡ ಖುಷಿ. ಆ ಖುಷಿಯ ಕುರಿತು ಒಂದೆರಡು ನುಡಗಳ ಬರೆಯಲು ನನ್ನ ಲೇಖನಿ ಒತ್ತಾಯಿಸಿದ ಕಾರಣಕ್ಕೆ ನನ್ನ ಖಾಲಿ ತಲೆ, ಖಾಲಿ ಕೈಯಿಂದ ಇ ಕೆಳಗಿನ ವಾಕ್ಯ ಪುಂಜಗಳು ನವ ಜೋಡಿಗಳಿರ್ವರಿಗೆ ಸಮರ್ಪಿತ.
"ಪರಿಣಯ ಅಥವಾ ದಾಂಪತ್ಯ ಎಂದೂ ಕರೆಯಲ್ಪಡುವ ಮದುವೆಯು ಸಾಮಾಜಿಕವಾಗಿ ಅಥವಾ ಶಾಸ್ತ್ರೋಕ್ತವಾಗಿ ಗುರುತಿಸಲ್ಪಟ್ಟ ಸಂಗಾತಿಗಳ ನಡುವಿನ ಒಕ್ಕೂಟ ಅಥವಾ ಕಾನೂನಾತ್ಮಕ ಒಪ್ಪಂದ. ಇದು ಅವರಿಬ್ಬರ ನಡುವಿನ, ಅವರ ಹಾಗೂ ಅವರ ಮಕ್ಕಳಿ ನಡುವಿನ, ಮತ್ತು ಅವರ ಹಾಗೂ ಅವರ ಸಂಬಂಧಿಕರ ನಡುವಿನ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಸ್ಥಾಪಿಸುತ್ತದೆ".
ಇ ಮೇಲಿನದು ಗೂಗಲ್ ಮಹಾರಾಜರ ಹಿರಿಮಗ ವಿಕಿಪೀಡಿಯ ಮದುವೆಯ ಬಗೆಗೆ ಕೊಡುವ ವ್ಯಾಖ್ಯಾನ. ಆದರೆ ಇ ವ್ಯಾಖ್ಯಾನಗಳಿಗಿಂತಲೂ ವೈಯಕ್ತಿಕವಾಗಿ ನಮ್ಮ ಮನದ ಧ್ವನಿಯಿಂದ ಹೊಮ್ಮುವ ಅರ್ಥವೇ ಯಾವತ್ತಿಗೂ ನಿವಾದುದ್ದು, ರಸಋಷಿ ಕುವೆಂಪುರವರು ಹೇಳುವಂತೆ
" ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?
ಬದುಕು ಎದೆಯ ದನಿಗೆ ಸಂಬದಿಸಿದ್ದೆ ಹೊರತು ನಾನು ಮದುವಯಲ್ಲಿ ಹಚ್ಚುವ ಡಿ ಜೆ ಹಾಡುಗಳಿಗೂ ಅಲ್ಲಾ ಭಜಂತ್ರಿಗಳು ಉದುವ ಬಾಜಾಗಳಿಗೂ ಅಲ್ಲ.
ಆನಂದಕ್ಕೆ ಹಣವೂ ಬೇಕಿಲ್ಲ ಹಿಂದೆ ಯಾರೂ ಕಾಣದಿರುವ ಬಣ್ಣವು ಬೇಕಿಲ್ಲ ಕೇವಲ ಬೇಕಿರುವುದು ಹೊಂದಾಣಿಕೆ ಮಾತ್ರ. ಅದಕ್ಕೆ ಬೇಂದ್ರೆಯವರು ಹೇಳಿರುವುದು.
"ನಾನು ಬಡವಿ, ಆತ ಬಡವ ಒಲವೇ ನಮ್ಮ ಬದುಕು.
ಬಳಸಿಕೊಂಡೆವದನೆ ನಾವು ಅದಕು, ಇದಕು, ಎದಕು".
ಮದುವೆಯಂದರೆ ಒಬ್ಬರಿಗೊಬ್ರು ಸಾಧಿಸುವ ಹಕ್ಕಲ್ಲ ಅದೂ ಒಬ್ಬರಿಗೊಬ್ಬರು ಮಾಡುವ ತ್ಯಾಗ.
ತ್ಯಾಗ ಜೀವನದ ಅತೀ ಸುಂದರ ಸಂಗತಿ ನಾವು ಮಾಡಿದ ತ್ಯಾಗದಿಂದ ಯಾರಿಗೆ ಎಷ್ಟು ಸಂತೋಷವಾಗುತ್ತದೊ ಗೊತ್ತಿಲ್ಲ. ಆದರೆ ತ್ಯಾಗ ಮಾಡಿದ ನಮಗೆ ಮಾತ್ರ ಅತೀ ಆನಂದಕರ ವಾಗಿರುತ್ತದೆ. ಆದರೆ ಎದುರಿನವರಿಗೆ ನಾವು ಮಾಡಿದ ತ್ಯಾಗದ ಅರಿವಾಗಬೇಕು ಆಗಲೇ ಸಂಬಂಧಗಳಲ್ಲಿ ಮಾಡುವ ತ್ಯಾಗಕ್ಕೆ ಬೆಲೆ, ನೆಲೆ.
ಇನ್ನು ಪ್ರೀತಿಯ ಕುರಿತು ಹೇಳಬೆಕೆಂದರೆ.
ಪ್ರಪಂಚದ ಪ್ರತಿಯೊಬ್ಬರ ಬದುಕು ಪ್ರೀತಿಎಂಬ ಚಕ್ರದಿಂದಲೇ ಮುಂದಕ್ಕೆ ಸಾಗೊದು. ಅದು ಆಗಾಗ ಕೆಲವೊಮ್ಮೆ ನಿಲ್ಲಲು ಪ್ರಯತ್ನ ಮಾಡುತ್ತದೆ. ಆಗ ನಮ್ಮ ಬೈಕಿಗೆ ಹೇಗೆ ಎಣ್ಣೆ ಹಾಕಿಮುಂದೆ ಸಾಗಿಸುತ್ತೆವೆಯೋ. ಹಾಗೆ ಪ್ರೀತಿಗೆ ಹೊಂದಾಣಿಕೆ ಹಾಗೂ ಮೌನವೆಂಬ ಎಣ್ಣೆ ಸುರಯುತ್ತಿರಬೇಕು. ಒಂದು ವೇಳೆ ಎಣ್ಣೆಗೆ ಸರಿಯಾಗದಿದ್ದರೆ ನಾವು ನಮ್ಮ ಮೋಟಾರ ಸೈಕಲನ್ನು ಗ್ಯಾರೆಜಿಗೆ ಒಯ್ಯುವಂತೆ ಹಿರಿಯರೆಂಬ ಗ್ಯಾರೆಜಿಗೆ ಒಯ್ಯಬೇಕು ಅವರು ರಿಪೇರಿ ಮಾಡಿದ ನಂತರ ಮತ್ತೆ ಇರ್ವರು ಸೇರಿ ಲಾಂಗ ಡ್ರೈವ್ ಹೋಗಬೇಕು.
ಒಟ್ಟಿನಲ್ಲಿ ಪ್ರೀತಿಯ ಅರ್ಥ "ಸಮಯ ವ್ಯರ್ಥ ಮಾಡದೆ ಮುಂದೆ ಸಾಗುವುದು" ಆಗಾಗ ಬಾಗುವುದು ನಗುವುದು, ಜಿಗಿಯುವುದು, ಕುಣಿಯುವುದು, ದಣಿಯುವುದು, ವಿರಮಿಸುವುದು, ಭ್ರಮಿಸುವುದು, ಪ್ರೇಮಿಸುವುದು ಹಾಗೂ ಮುಖ್ಯವಾಗಿ ಕ್ಷಮಿಸುವುದು.
ಹದಿಬದೆಯ ಧರ್ಮ ಕೃತಿಯಲ್ಲಿ ಸಂಚಿ ಹೊನ್ನಮ್ಮ ಪತಿಯ ಧರ್ಮದ ಕುರಿತು ಹೀಗೆ ಹೇಳುತ್ತಾಳೆ. " ಏರು ಯೌವನದಿ ಜೋರು ಪ್ರೀತಿ ಮಾಡಿ ಮುದಿತನದಿ ಯಾರೇ ನೀ ಎನ್ನಬೇಡವೊ ಪತಿಯೇ" ಎಂದು. ಅದು ಎಷ್ಟೊಂದು ನಿಜವಲ್ಲವೇ ತನ್ನದೆಲ್ಲವನ್ನು ಬಿಟ್ಟು ಬಂದವಳಿಗೆ ನಮ್ಮ ಮನೆಯವಳನ್ನಾಗಿ ಮಾಡಿಕೊಂಡು ನಮ್ಮ ಮನೆಯೇ ಅವಳದನ್ನಾಗಿ ಮಾಡುವುದರಲ್ಲೆ ಮದುವೆಯ ಮಹಿಮೆ ಅಡಗಿದೆ ನಜೀರಸಾಬ.
ಇದಕ್ಕೆ ಸ್ವಲ್ಪ ಸಮಯವೂ ಬೇಕು. ನಮ್ಮ ತಂಗಿ ನಾಜಮೀನ ತುಂಬಾ ಚಿಕ್ಕವಳು ನೀನವಳನ್ನು ಸಹಿಸಿ ಸಾಗು ಇದು ಅಣ್ಣನ ಸ್ಥಾನದಲ್ಲಿರುವ ನನ್ನ ವೈಯಕ್ತಿಕ ಮನವಿ.
"ಗಂಡನಧರ್ಮ ಅರ್ಥವಾಗೊದು ಹೆಂಡತಿಯ ಅನಾರೋಗ್ಯದಲ್ಲಿ.
ಹೆಂಡತಿಯ ಧರ್ಮ ಅರ್ಥವಾಗೊದು ಗಂಡನ ಬಡತನದಲ್ಲಿ." ಇದು ಹಿರಿನುಡಿ ಇದರ ಪ್ರತಿ ಪದದ ಅರ್ಥವೂ ನಿಮ್ಮಿಬ್ಬರಿಗಿರಲಿ.
ಅಕಾಲ ಕಾಲದ ನಡುವೆ ಸುಕಾಲ ಕಾಲ ಹುಡುಕುವ ಕಷ್ಟ ಕಾಲವೇ ಜೀವನ. ಒಟ್ಟಿಗೆ ಬಾಳುವ ಭರದಲ್ಲಿ ಹಲವಾರು ತ್ಯಾಗಕ್ಕೆ ಸಿದ್ಧರಾದರೆ ಪಾವನ.
ಒಂದು ಕಾಲಮಾಪಕದಂತೆ (ಗಡಿಯಾರ) ನಮ್ಮ ಜೀವನ ನಜೀರಸಾಬ. ಗಡಿಯಾರಕ್ಕಿರುವ ಸೆಕೆಂಡಿನ ಮುಳ್ಳು ಮುಂದಾಗುವ ಶಿಶುವು, ನಿಮಿಷದ ಮುಳ್ಳು ನಿಮಿಷಾ ಮನಸಿನ ಮಡದಿ. ಗಟ್ಟಿತನದ ಗಂಟೆಯ ಮುಳ್ಳೆ ಗಂಡಾ. ಸಾವಿರಾರು ಬಾರಿ ಸೆಕೆಂಡಿನ ಮುಳ್ಳಯ ಮೇಲೆ ಹಾದರೂ. ನೂರಾರು ಬಾರಿ ನಿಮಿಷದ ಮುಳ್ಳು ದೂರ ಸರಿದರೂ. ಇದ್ದಲ್ಲೆ ಇದ್ದು ನಿಧಾನ ಚಲಿಸುತ್ತಾ ಅವುಗಳು ಬರುವಂತೆ ಕಾಯುವ ಗಾಂಭೀರ್ಯದ ನಡಿಗೆಯೇ ಗಂಡನ ಮನೋಧರ್ಮ.
ಕಾಲಕ್ಕೆ ತಕ್ಕಂತೆ ಭೌತಿಕ ಬದಲಾವಣೆ ಅನಿವಾರ್ಯ.
ಮಾನಸಿಕ ಬದಲಾವಣೆ ಕ್ರೌರ್ಯ. ಮನಸೋ ಇಚ್ಚೆ ಯಾವತ್ತೂ ಒಂದಾಗಿದ್ದು ನಿಮ್ಮ ಬದುಕು ವಜ್ರ ವೈಡೂರ್ಯ, ಬಂಗಾರ, ಬೆಳ್ಳಿಗೂ ಕೋಟಿ ಕೋಟಿ ಪಟ್ಟು ಮಿಗಿಲಾಗಿರಲಿ ಗೆಳೆಯ ನಜೀರಸಾಬ ಮತ್ತು ತಂಗಿ ನಾಜಮೀನ.
ಪ್ರೀತಿಯಂಬ ನೌಕೆಯನ್ನು ಪ್ರೇಮವೆಂಬ ಹುಟ್ಟಿನಿಂದ ಸಮಸ್ಯೆಗಳೆಂಬ ಅಲೆಗಳನ್ನು ಯಶಸ್ವಿಯಾಗಿ ದಾಟುತ್ತಾ ಸಾಗಿ. ಬದುಕಿನ ನೂರು ರಾಗಗಳು ನಿಮ್ಮ ಮನದ ವೀಣೆ ಮೀಟುತಿರಲಿ.
"ತಕ್ಕಡಿ ಸರಿಯಾಗಿದ್ದರೆ ವ್ಯಾಪಾರ
ಗಂಡ ಹೆಂಡತಿ ಸರಿಯಾಗಿದಂದರೆ ಸಂಸಾರ".
ಬಾಳ ದಾರಿಯಲ್ಲಿ ಹೂವುಗಳ ಹಾಸಿಗೆ.
ಯುಗಕ್ಕೊಂದು ಉದಾಹರಣೆಯಾಗಲಿ ನಿಮ್ಮ ಬೆಸುಗೆ.
ಮೂರು ಪದಗಳ ಮಹಾಕಾವ್ಯ,
ಇರ್ವರ ರಾಗಗಳ ಸಮ್ಮಿಲನವಾದರೆ ಶ್ರಾವ್ಯ,
ಮನೆಯ ಮನಗಳೆಲ್ಲ ಸೇರಿದರೆ ಭವ್ಯ,
ದಿನಕ್ಕೊಂದು ಕ್ಷಣಕ್ಕೊಂದು ಆಸೆಗಳ ನವ್ಯ,
ಎಲ್ಲವೂ ಖಾಲಿಯಾದ್ರೂ ಕೊನೆಯಾಗದ ದಿವ್ಯ.
ನಿನ್ನ ಮನೋಭಾವ ಅತೀ ಸೌಮ್ಯವಾದುದ್ದು,
ನಿನ್ನ ಆಲೋಚನೆಗಳು ತುಂಬಾ ರಮ್ಯವಾದವು,
ನಿನ್ನ ವ್ಯಕ್ತಿತ್ವ ಬಹಳ ನಮ್ಯವಾದುದ್ದು.
ಇದು ಬಸವಣ್ಣನ ಬಾಗೇವಾಡಿಯಲ್ಲಿ ಜನಿಸಿರುವ ನಿನಗೆ ಅಲ್ಲಿನ ಮಣ್ಣಿನ ಗುಣಗಳು ನಿನ್ನ ಮೈಏರಿವೆ ಎನ್ನುವದರಲ್ಲಿ ಎರಡು ಮಾತಿಲ್ಲ.
ತುಂಬಾ ವಿಶಾಲ ಮನೋಧರ್ಮದ ಕೌಟುಂಬಿಕ ವಾತಾವರಣ, ಸ್ನೇಹತತ್ವ ಕ್ಕೆ ಯಾವತ್ತೂ ಬದ್ದರಾಗಿ ಜೋತೆಗಿರುವ ಮಹಾಂತೇಶ ಸರ ಹಾಗೂ ವಿಜಯರವರು ನಿನಗೆ ದಕ್ಕಿರುವ ವರಗಳೇ ನಿಜ.
ನೀನು ಕೆಲಸ ಮಾಡುತ್ತಿರುವುದು ಕೂಡಾ ಸಹಕಾರಿ ಇಲಾಖೆ. ಸಹಕಾರ ನಿನ್ನ ಮೂಲ ಮಂತ್ರ ಅದಕ್ಕೆ ಇಷ್ಟೆಲ್ಲಾ ಅನುಕೂಲಗಳನ್ನು ಬೇಡದೆ ಪಡೆದಿರುವುದು ನಿನ್ನ ತಪಸ್ಸೆ ಸರಿ ಗೆಳೆಯ.

"ಮನ್ನತವಿಲ್ಲಾ" ಎಂಬ ಮಹಾಮನೆಯನ್ನು ಕಟ್ಟಿ ತಮ್ಮನಾದ ರಿಯಾಜ ಯಾವತ್ತೂ ನಮ್ಮ ಸಂಭಾವಿತ ಅಣ್ಣನಿಗೆ ನಾನೇ ರಕ್ಷಕ ಎಂದು ಪಕ್ಕಕ್ಕೆ ನಿಲ್ಲುವ ಲಕ್ಷ್ಮಣ ಸಮಾನ. ಇಂಥ ಹಲವಾರು ಹೌದುಗಳ ನಡುವೆ ನಾನು ನೀನು ಹಾಗೂ ಇನ್ನೂ ಕೆಲವು ಸ್ನೇಹಿತರು ಸೇರಿದ್ದು 2015 ವಕ್ಫ ನೇಮಕಾತಿಯಲ್ಲಿ. ಅದೇಲ್ಲವೂ ಬದುಕಿನ ಒಂದು ಭ್ರಮಾ ಲೋಕದ ಅಧ್ಯಾಯ ಅದನ್ನು ಮುಗಿಸಿ ನಿನ್ನ ಊರಿಗೆ ನೀನು ಮರಳಿ ತುಂಬಾ ಒಳ್ಳೆತ ಹುದ್ದೆಪಡೆದು ಪ್ರಾಮಾಣಿಕವಾಗಿ ದುಡಿಯುತ್ತಿರುವುದು ಹಲವಾರು ಜನರಿಗೆ ಸಿಹಿ ಸವಿದಷ್ಠೇ ಖುಷಿ ಆದರೆ ಆತ್ಮೀಯ ಗೆಳೆಯನಾದ ನನಗೆ ಮಾತ್ರ ಒಂದು ಅಂಯ್ಯಂಗಾರ ಬೇಕರಿಯನ್ನೆ ಕೊಂಡು ತಿಂದಂಥ ಖುಷಿ.
ಇ ಎಲ್ಲಾ ಆನಂದಮಯ ಬದುಕಿನಲ್ಲಿ ಮದುವೆಯೊಂದು ಬಹುದೊಡ್ಡ ಖುಷಿ. ಆ ಖುಷಿಯ ಕುರಿತು ಒಂದೆರಡು ನುಡಗಳ ಬರೆಯಲು ನನ್ನ ಲೇಖನಿ ಒತ್ತಾಯಿಸಿದ ಕಾರಣಕ್ಕೆ ನನ್ನ ಖಾಲಿ ತಲೆ, ಖಾಲಿ ಕೈಯಿಂದ ಇ ಕೆಳಗಿನ ವಾಕ್ಯ ಪುಂಜಗಳು ನವ ಜೋಡಿಗಳಿರ್ವರಿಗೆ ಸಮರ್ಪಿತ.
"ಪರಿಣಯ ಅಥವಾ ದಾಂಪತ್ಯ ಎಂದೂ ಕರೆಯಲ್ಪಡುವ ಮದುವೆಯು ಸಾಮಾಜಿಕವಾಗಿ ಅಥವಾ ಶಾಸ್ತ್ರೋಕ್ತವಾಗಿ ಗುರುತಿಸಲ್ಪಟ್ಟ ಸಂಗಾತಿಗಳ ನಡುವಿನ ಒಕ್ಕೂಟ ಅಥವಾ ಕಾನೂನಾತ್ಮಕ ಒಪ್ಪಂದ. ಇದು ಅವರಿಬ್ಬರ ನಡುವಿನ, ಅವರ ಹಾಗೂ ಅವರ ಮಕ್ಕಳಿ ನಡುವಿನ, ಮತ್ತು ಅವರ ಹಾಗೂ ಅವರ ಸಂಬಂಧಿಕರ ನಡುವಿನ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಸ್ಥಾಪಿಸುತ್ತದೆ".
ಇ ಮೇಲಿನದು ಗೂಗಲ್ ಮಹಾರಾಜರ ಹಿರಿಮಗ ವಿಕಿಪೀಡಿಯ ಮದುವೆಯ ಬಗೆಗೆ ಕೊಡುವ ವ್ಯಾಖ್ಯಾನ. ಆದರೆ ಇ ವ್ಯಾಖ್ಯಾನಗಳಿಗಿಂತಲೂ ವೈಯಕ್ತಿಕವಾಗಿ ನಮ್ಮ ಮನದ ಧ್ವನಿಯಿಂದ ಹೊಮ್ಮುವ ಅರ್ಥವೇ ಯಾವತ್ತಿಗೂ ನಿವಾದುದ್ದು, ರಸಋಷಿ ಕುವೆಂಪುರವರು ಹೇಳುವಂತೆ
" ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?
ಬದುಕು ಎದೆಯ ದನಿಗೆ ಸಂಬದಿಸಿದ್ದೆ ಹೊರತು ನಾನು ಮದುವಯಲ್ಲಿ ಹಚ್ಚುವ ಡಿ ಜೆ ಹಾಡುಗಳಿಗೂ ಅಲ್ಲಾ ಭಜಂತ್ರಿಗಳು ಉದುವ ಬಾಜಾಗಳಿಗೂ ಅಲ್ಲ.
ಆನಂದಕ್ಕೆ ಹಣವೂ ಬೇಕಿಲ್ಲ ಹಿಂದೆ ಯಾರೂ ಕಾಣದಿರುವ ಬಣ್ಣವು ಬೇಕಿಲ್ಲ ಕೇವಲ ಬೇಕಿರುವುದು ಹೊಂದಾಣಿಕೆ ಮಾತ್ರ. ಅದಕ್ಕೆ ಬೇಂದ್ರೆಯವರು ಹೇಳಿರುವುದು.
"ನಾನು ಬಡವಿ, ಆತ ಬಡವ ಒಲವೇ ನಮ್ಮ ಬದುಕು.
ಬಳಸಿಕೊಂಡೆವದನೆ ನಾವು ಅದಕು, ಇದಕು, ಎದಕು".
ಮದುವೆಯಂದರೆ ಒಬ್ಬರಿಗೊಬ್ರು ಸಾಧಿಸುವ ಹಕ್ಕಲ್ಲ ಅದೂ ಒಬ್ಬರಿಗೊಬ್ಬರು ಮಾಡುವ ತ್ಯಾಗ.
ತ್ಯಾಗ ಜೀವನದ ಅತೀ ಸುಂದರ ಸಂಗತಿ ನಾವು ಮಾಡಿದ ತ್ಯಾಗದಿಂದ ಯಾರಿಗೆ ಎಷ್ಟು ಸಂತೋಷವಾಗುತ್ತದೊ ಗೊತ್ತಿಲ್ಲ. ಆದರೆ ತ್ಯಾಗ ಮಾಡಿದ ನಮಗೆ ಮಾತ್ರ ಅತೀ ಆನಂದಕರ ವಾಗಿರುತ್ತದೆ. ಆದರೆ ಎದುರಿನವರಿಗೆ ನಾವು ಮಾಡಿದ ತ್ಯಾಗದ ಅರಿವಾಗಬೇಕು ಆಗಲೇ ಸಂಬಂಧಗಳಲ್ಲಿ ಮಾಡುವ ತ್ಯಾಗಕ್ಕೆ ಬೆಲೆ, ನೆಲೆ.
ಇನ್ನು ಪ್ರೀತಿಯ ಕುರಿತು ಹೇಳಬೆಕೆಂದರೆ.
ಪ್ರಪಂಚದ ಪ್ರತಿಯೊಬ್ಬರ ಬದುಕು ಪ್ರೀತಿಎಂಬ ಚಕ್ರದಿಂದಲೇ ಮುಂದಕ್ಕೆ ಸಾಗೊದು. ಅದು ಆಗಾಗ ಕೆಲವೊಮ್ಮೆ ನಿಲ್ಲಲು ಪ್ರಯತ್ನ ಮಾಡುತ್ತದೆ. ಆಗ ನಮ್ಮ ಬೈಕಿಗೆ ಹೇಗೆ ಎಣ್ಣೆ ಹಾಕಿಮುಂದೆ ಸಾಗಿಸುತ್ತೆವೆಯೋ. ಹಾಗೆ ಪ್ರೀತಿಗೆ ಹೊಂದಾಣಿಕೆ ಹಾಗೂ ಮೌನವೆಂಬ ಎಣ್ಣೆ ಸುರಯುತ್ತಿರಬೇಕು. ಒಂದು ವೇಳೆ ಎಣ್ಣೆಗೆ ಸರಿಯಾಗದಿದ್ದರೆ ನಾವು ನಮ್ಮ ಮೋಟಾರ ಸೈಕಲನ್ನು ಗ್ಯಾರೆಜಿಗೆ ಒಯ್ಯುವಂತೆ ಹಿರಿಯರೆಂಬ ಗ್ಯಾರೆಜಿಗೆ ಒಯ್ಯಬೇಕು ಅವರು ರಿಪೇರಿ ಮಾಡಿದ ನಂತರ ಮತ್ತೆ ಇರ್ವರು ಸೇರಿ ಲಾಂಗ ಡ್ರೈವ್ ಹೋಗಬೇಕು.
ಒಟ್ಟಿನಲ್ಲಿ ಪ್ರೀತಿಯ ಅರ್ಥ "ಸಮಯ ವ್ಯರ್ಥ ಮಾಡದೆ ಮುಂದೆ ಸಾಗುವುದು" ಆಗಾಗ ಬಾಗುವುದು ನಗುವುದು, ಜಿಗಿಯುವುದು, ಕುಣಿಯುವುದು, ದಣಿಯುವುದು, ವಿರಮಿಸುವುದು, ಭ್ರಮಿಸುವುದು, ಪ್ರೇಮಿಸುವುದು ಹಾಗೂ ಮುಖ್ಯವಾಗಿ ಕ್ಷಮಿಸುವುದು.
ಹದಿಬದೆಯ ಧರ್ಮ ಕೃತಿಯಲ್ಲಿ ಸಂಚಿ ಹೊನ್ನಮ್ಮ ಪತಿಯ ಧರ್ಮದ ಕುರಿತು ಹೀಗೆ ಹೇಳುತ್ತಾಳೆ. " ಏರು ಯೌವನದಿ ಜೋರು ಪ್ರೀತಿ ಮಾಡಿ ಮುದಿತನದಿ ಯಾರೇ ನೀ ಎನ್ನಬೇಡವೊ ಪತಿಯೇ" ಎಂದು. ಅದು ಎಷ್ಟೊಂದು ನಿಜವಲ್ಲವೇ ತನ್ನದೆಲ್ಲವನ್ನು ಬಿಟ್ಟು ಬಂದವಳಿಗೆ ನಮ್ಮ ಮನೆಯವಳನ್ನಾಗಿ ಮಾಡಿಕೊಂಡು ನಮ್ಮ ಮನೆಯೇ ಅವಳದನ್ನಾಗಿ ಮಾಡುವುದರಲ್ಲೆ ಮದುವೆಯ ಮಹಿಮೆ ಅಡಗಿದೆ ನಜೀರಸಾಬ.
ಇದಕ್ಕೆ ಸ್ವಲ್ಪ ಸಮಯವೂ ಬೇಕು. ನಮ್ಮ ತಂಗಿ ನಾಜಮೀನ ತುಂಬಾ ಚಿಕ್ಕವಳು ನೀನವಳನ್ನು ಸಹಿಸಿ ಸಾಗು ಇದು ಅಣ್ಣನ ಸ್ಥಾನದಲ್ಲಿರುವ ನನ್ನ ವೈಯಕ್ತಿಕ ಮನವಿ.
"ಗಂಡನಧರ್ಮ ಅರ್ಥವಾಗೊದು ಹೆಂಡತಿಯ ಅನಾರೋಗ್ಯದಲ್ಲಿ.
ಹೆಂಡತಿಯ ಧರ್ಮ ಅರ್ಥವಾಗೊದು ಗಂಡನ ಬಡತನದಲ್ಲಿ." ಇದು ಹಿರಿನುಡಿ ಇದರ ಪ್ರತಿ ಪದದ ಅರ್ಥವೂ ನಿಮ್ಮಿಬ್ಬರಿಗಿರಲಿ.
ಅಕಾಲ ಕಾಲದ ನಡುವೆ ಸುಕಾಲ ಕಾಲ ಹುಡುಕುವ ಕಷ್ಟ ಕಾಲವೇ ಜೀವನ. ಒಟ್ಟಿಗೆ ಬಾಳುವ ಭರದಲ್ಲಿ ಹಲವಾರು ತ್ಯಾಗಕ್ಕೆ ಸಿದ್ಧರಾದರೆ ಪಾವನ.
ಒಂದು ಕಾಲಮಾಪಕದಂತೆ (ಗಡಿಯಾರ) ನಮ್ಮ ಜೀವನ ನಜೀರಸಾಬ. ಗಡಿಯಾರಕ್ಕಿರುವ ಸೆಕೆಂಡಿನ ಮುಳ್ಳು ಮುಂದಾಗುವ ಶಿಶುವು, ನಿಮಿಷದ ಮುಳ್ಳು ನಿಮಿಷಾ ಮನಸಿನ ಮಡದಿ. ಗಟ್ಟಿತನದ ಗಂಟೆಯ ಮುಳ್ಳೆ ಗಂಡಾ. ಸಾವಿರಾರು ಬಾರಿ ಸೆಕೆಂಡಿನ ಮುಳ್ಳಯ ಮೇಲೆ ಹಾದರೂ. ನೂರಾರು ಬಾರಿ ನಿಮಿಷದ ಮುಳ್ಳು ದೂರ ಸರಿದರೂ. ಇದ್ದಲ್ಲೆ ಇದ್ದು ನಿಧಾನ ಚಲಿಸುತ್ತಾ ಅವುಗಳು ಬರುವಂತೆ ಕಾಯುವ ಗಾಂಭೀರ್ಯದ ನಡಿಗೆಯೇ ಗಂಡನ ಮನೋಧರ್ಮ.
ಕಾಲಕ್ಕೆ ತಕ್ಕಂತೆ ಭೌತಿಕ ಬದಲಾವಣೆ ಅನಿವಾರ್ಯ.
ಮಾನಸಿಕ ಬದಲಾವಣೆ ಕ್ರೌರ್ಯ. ಮನಸೋ ಇಚ್ಚೆ ಯಾವತ್ತೂ ಒಂದಾಗಿದ್ದು ನಿಮ್ಮ ಬದುಕು ವಜ್ರ ವೈಡೂರ್ಯ, ಬಂಗಾರ, ಬೆಳ್ಳಿಗೂ ಕೋಟಿ ಕೋಟಿ ಪಟ್ಟು ಮಿಗಿಲಾಗಿರಲಿ ಗೆಳೆಯ ನಜೀರಸಾಬ ಮತ್ತು ತಂಗಿ ನಾಜಮೀನ.
ಮುದ್ದು ತಂಗಿಯ ಮಡಿಲಿಗೆ.
ಆತ್ಮೀಯ ಗೆಳೆಯನ ಹೆಗಲಿಗೆ.
ಇ ಪಂಚಾಗ ಸರಿಯುವುದರಲ್ಲಿ
ಬರಲಿ ಬಾಹುಬಲಿ (ಸೆಕೆಂಡಿನ ಮುಳ್ಳು)
ಆತ್ಮೀಯ ಗೆಳೆಯನ ಹೆಗಲಿಗೆ.
ಇ ಪಂಚಾಗ ಸರಿಯುವುದರಲ್ಲಿ
ಬರಲಿ ಬಾಹುಬಲಿ (ಸೆಕೆಂಡಿನ ಮುಳ್ಳು)
ಪ್ರೀತಿಯಂಬ ನೌಕೆಯನ್ನು ಪ್ರೇಮವೆಂಬ ಹುಟ್ಟಿನಿಂದ ಸಮಸ್ಯೆಗಳೆಂಬ ಅಲೆಗಳನ್ನು ಯಶಸ್ವಿಯಾಗಿ ದಾಟುತ್ತಾ ಸಾಗಿ. ಬದುಕಿನ ನೂರು ರಾಗಗಳು ನಿಮ್ಮ ಮನದ ವೀಣೆ ಮೀಟುತಿರಲಿ.
"ತಕ್ಕಡಿ ಸರಿಯಾಗಿದ್ದರೆ ವ್ಯಾಪಾರ
ಗಂಡ ಹೆಂಡತಿ ಸರಿಯಾಗಿದಂದರೆ ಸಂಸಾರ".
ಬಾಳ ದಾರಿಯಲ್ಲಿ ಹೂವುಗಳ ಹಾಸಿಗೆ.
ಯುಗಕ್ಕೊಂದು ಉದಾಹರಣೆಯಾಗಲಿ ನಿಮ್ಮ ಬೆಸುಗೆ.
🖋🖋 ಇಂತಿ ಗೆಳೆಯ ✒✒
ಮಶ್ಯಾಕ ಎಮ್ ಗೌಂಡಿ.
ಸಾ॥ ಯಂಭತ್ನಾಳ....
ಮಶ್ಯಾಕ ಎಮ್ ಗೌಂಡಿ.
ಸಾ॥ ಯಂಭತ್ನಾಳ....
ದಿನಾಂಕ : ೨೮/೦೨/೨೦೨೧
ಆತ್ಮೀಯ ಗೆಳೆಯ ಮಶಾಕಸಾಬ ,ನೀವು ಕಳುಹಿಸಿದ ಲೇಖನವನ್ನು ಓದಿ ತುಂಬಾ ಆನಂದವಾಯಿತು. ರಕ್ತ ರಕ್ತ ಸಂಬಂಧಗಳಿಗಿಂತ ಸ್ನೇಹ ಸಂಬಂಧ ಕೊನೆಯಿಲ್ಲದ ಸಂಬಂಧ ಎಂಬುದು ನಿಮ್ಮಿಂದ ಮತ್ತೆ ಮತ್ತೆ ನೆನಪಾಗುತ್ತಿದೆ.. ಈ ನಿಮ್ಮ ಅದ್ಭುತವಾದ ಲೇಖನದ ಮೂಲಕ ನವಜೋಡಿಗಳಿಗೆ ಶುಭ ಹಾರೈಸಿ ಜೀವನದ ಸಂದೇಶಗಳನ್ನು ನೀಡುವುದಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ... ಇಂತಿ ನಿಮ್ಮ ಆತ್ಮೀಯ ನಜೀರ್ ಸಾಬ್....🙏🏻🙏🏻😊😘😘💐💐
ಪ್ರತ್ಯುತ್ತರಅಳಿಸಿThank u very much NAZEER SAB
ಅಳಿಸಿ