ಕಿವಿಗಳೆಲ್ಲ_ಕವಿಗಳಾದಾಗ_ಭಾಗ ೨

#ಕಿವಿಗಳೆಲ್ಲ_ಕವಿಗಳಾದಾಗ_ಭಾಗ_ಎರಡು
🌹🌹🌹🌹🌹🌹🌹🌹🌹🌹🌹🌹🌹🌹
ನಾನು ಇದುವರೆಗೂ ಅವರಿಗೆ ನೀಡಿದ ಪ್ರೆಶ್ನೆಗಳು ಈ ಕೆಳಗಿವೆ....       ನನ್ನ (ವಿದ್ಯಾಥಿಯ)
1) ನನ್ನ ಜೀವನದ ಗುರಿ ಏನು ಮತ್ತು ಏಕೆ ?
2) ನನ್ನ ಪ್ರೀತಿಯ ಅಮ್ಮನಿಗಾಗಿ ಎರಡು ಪುಟ ಬರವಣಿಗೆ ?
3) ನಾನು ನನ್ನ ನೆರೆ ಹೊರೆಯವರೊಂದಿಗೆ ಹೇಗಿರಬೇಕು ? ಹಾಗೂ ಅವ್ರು ನನ್ನೊಂದಿಗೆ ಅವ್ರು ಹೇಗಿರಬೇಕು ?
4) ನನ್ನ ಪ್ರಕಾರ ನನ್ನ ಊರು ಹೇಗಿರಬೇಕು ?
5) ನನ್ನ ಶಾಲೆಗೆ ನಾನು ಹೇಗೆ ಕೀರ್ತಿ ತರಬೇಕು ?

6) ನನ್ನ ಪ್ರಕಾರ ನನ್ನ ದೇಶದ ಶಿಕ್ಷಣ ವ್ಯವಸ್ಥೆ ಹೇಗಿರಬೇಕು ?
7) ನನ್ನ ಕುಟುಂಬದ ವಂಶ ವೃಕ್ಷ ಹಾಗೂ ಶಿಕ್ಷಣ ?
8) ನಾನು ಕೆಟ್ಟವನೋ /ಳೋ ಅಥವಾ ಒಳ್ಳಯವನೋ/ ಳೋ ಕಾರಣ ಸಹಿತಿ ವಿವರಣೆ ????
9) ಜೀವನದಲ್ಲಿ ನೋವು ದುಃಖ ಕಷ್ಟ ಅವಶ್ಯವೇ ? ಏಕೆ ?
10) ಜೀವನದಲ್ಲಿ ಶಾಂತಿ ಸಹನೆ ಪ್ರಾಮಾಣಿಕತೆ ನಂಬಿಕೆಗಳು ಎಷ್ಟು ಪ್ರಮುಖವಾದವುಗಳು ಬರೆಯಿರಿ..
11) ಮಳೆಗೆ ಮನವಿ ಶೀರ್ಷಿಕೆ ಅಡಿಯಲ್ಲಿ ಕವನ ಬರೆಯಿರಿ ?
12 ) ನಮ್ಮ ಗೆಳೆತನ ಕುರಿತು ಕವನ ಬರೆಯಿರಿ ?.????

ಇಂತಹ ಪ್ರೆಶ್ನೆಗಳಿಗೆ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಉತ್ತರಿಸಬಹುದಾ ಎಂದು ನೀವು ಗಾಬರಿಯಾದರೆ; ಆಶ್ಚರ್ಯವೇನು ಇಲ್ಲ, ಯಾಕೆಂದರೆ ಅವ್ರು ಬರೆಯೋ ಉತ್ತರ ನೋಡಿ ನಿಮಗಿಂತ ಹೆಚ್ಚಿಗೆ ಗಾಬರಿಯಾಗಿದ್ದಕ್ಕೆ ನಾನು ಈ ಲೇಖನ ಬರೆಯುತ್ತಿರುವದು....

ನಾನು ಆ ಶಾಲೆಗೆ ಹೊದಾಗಿನಿಂದ ಬರೆದ ಎಲ್ಲ ಕವಿತೆಗಳನ್ನು ವಾಚನ ಮಾಡಿದ್ದೇನೆ, ಹಾಗೂ ಅವ್ರು ಕೇಳೋ,
ಸರ್ ಕವನ ಹೇಗೆ ಬರೆಯುವದು ? ವಿಚಾರ ಹೇಗೆ ಮಾಡೋದು ? ಪ್ರಾಸ ಹೇಗೆ ? ಎನ್ನುವ ಹಲವು ಪ್ರೆಶ್ನೆಗ
ಳಿಗೆ ಉತ್ತರಿಸಿದ್ದೇನೆ, ಆದರೆ ಸ್ನೇಹಿತರೆ, ನನ್ನ ವಿದ್ಯಾರ್ಥಿಗಳ ತಲೆಯಲ್ಲಿನ ಮೆದುಳಿಗೆ ಯಾವ ಸಾಹಿತ್ಯ ಶಿಖರ /ಕವಿಯ ವರವಾಯಿತೋ ಕಾಣೆ ??

#ಯಾವ ಜಗತ್ತಿನ ಸೌಂದರ್ಯ ಸೆಳೆಯಿತೋ ಕಾಣೆ ?
#ಯಾವ ಪುಸ್ತಕದ ಪುಟ ಅವ್ರನ್ನು ಬಡಿದು ಎಚ್ಚರಿಸಿತೋ ಕಾಣೆ ?
#ಯಾವ ಘಳಿಗೆ ಅವ್ರಿಗೆ ಗುರುವಾಯಿತೋ ಕಾಣೆ ?
ಯಾಕೆಂದರೆ ಆ ದಿನ ನಂಬಲಾಗಲಿಲ್ಲ ನನ್ನ ನಾನೆ ??
ಕೈ ಮುಟ್ಟಿ ಮಾಡಿ ನುಡಿದರೆಲ್ಲ ಆಣೆ.

ಸರ್ ನಾವು ಸಾಹಿತ್ಯ ಬರೆಯೋದು ನಮ್ಮ ಜೀವನ ಪೂರ್ತಿ ಬಿಡೋದಿಲ್ಲ ಅಂತ ?
ನನಗೆ ಆ ಮಾತು ಕೇಳಿ.... .
ವೃತ್ತಿಯಿಂದ ನಿವೃತ್ತಿಯಾದಾಗ ಪಡೆಯೋ ಫಂಡ್ ಎಲ್ಲ ಒಮ್ಮೆ ಪಡೆದಷ್ಟು ಖುಷಿಯಾಯಿತು....

#ಮೊದಲ_ಕವಿತೆ_ಮಳೆ_ಬರಿಸುತ್ತೆ_??

ಪ್ರತಿ ವಾರ ಕೊಡೋ ಪ್ರಶ್ನೇಗಳಲ್ಲಿ #ಮಳೆಗೆ_ಮನವಿ " ಶೀರ್ಷಿಕೆ ಅಡಿಯಲ್ಲಿ ಒಂದು ಕವನ ಬರೆಯಿರಿ ಅನ್ನೋದಾಗಿತ್ತು....
ಒಣಗುತ್ತಿರುವ ಬೆಳೆಗಳನ್ನು ಕಂಡು ಹೇಳಿದ್ದೆ.....
ಆದ್ರೆ ಅವ್ರ ಕವಿತೆಯಲ್ಲಿ ಬೆಳೆಗಳಿಗೆ ನೀಡೋ ಚೇತನ ಇದೆ ಅನ್ಕೊಂಡಿರಲಿಲ್ಲ.... ಅವ್ರು ಕೊಟ್ಟ ಕವಿತೆಗಳನ್ನು
ಓದುತ್ತಿದ್ದರೆ, ನಾನು ಬಹುಶ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕೂತಿದ್ದೇನೆ ಅನಿಸಿತ್ತು.... ಅಷ್ಟೊಂದು ಅಧ್ಬುತವಾದ ಮನವಿ ಅವ್ರು ಮಳೆಗೆ ಮಾಡಿದ್ದರು...

ಅದಕ್ಕೆ ಮರು ದಿನವೇ #ಅವ್ರ_ಪುಟ್ಟ_ಹೃದಯದ_ದಿಟ್ಟ_ಮನವಿಗೆ_ಮೇಘರಾಜ_ಮಳೆಯ_ಮಾಲೆಯನ್ನು_ಸುರಿಸಿಯೆ_ಬಿಟ್ಟ.
ಅವರ ಮನವಿ ಮೋಡಕ್ಕೆ ತಲುಪಿ ಮಳೆ ಬಂತೇಂದು ಹೇಳಿದೆ
ಅದಕ್ಕೆ ಅವ್ರು ಅದ್ಭುತವಾದ ನಿಸರ್ಗ ಕವಿಗಳೆಂದು ಹೇಳಿದೆ...

ಅವ್ರು ಬರೆದಿರೋ ಕವನಗಳೆಲ್ಲಾ ಸೇರಿ ಕೆಟ್ಟ ದೃಷ್ಟಿ ಯಿಂದ ನನ್ನೆಡೆಗೆ ನೋಡಿ ಪ್ರಶ್ನಿಸುತ್ತವೇ, ಏನೇಂದು ಗೊತ್ತೆ??
ಹೇ, ಮಶ್ಯಾಕ ಗೌಂಡಿ ನೀನು 7 ನೇ ತರಗತಿ ಇದ್ದಾಗ ಕವನ ಬರೆದಿದ್ದಿ ಏನೋ ಅಂತ,???, ಇಲ್ಲವೆಂದು ಉತ್ತರಿಸಿ ಸೋಲುತ್ತೇನೆ.. ಆ ಮೇಲೆ ಬರೆದವರು ನನ್ನ ವಿದ್ಯಾರ್ಥಿಗಳೆ ಅಲ್ಲವೇ ಎಂದು ಹೇಳಿ ಮತ್ತೆ ಗೆಲ್ಲುತ್ತೇನೆ....

ದಿನಾಲೂ ನನ್ನ ಹತ್ತಿರ ನಾಲ್ಕಾರು ಕವಿಗಳು ಬಂದು ತಮ್ಮ ಕವಿತೆಗಳನ್ನು ತೋರಿಸುತ್ತಾರೆ, ಅವೆಲ್ಲ ನೋಡಿ ಬೆರಗಾಗುತ್ತೇನೆ, ಅವ್ರನ್ನು ಕರೆದು ಪ್ರಾರ್ಥನೆಯಲ್ಲಿ ಕರೆದು ವಾಚನ ಮಾಡಿಸುತ್ತೇನೆ, ಎಲ್ಲ ಶಿಕ್ಷಕರು ವಿದ್ಯಾರ್ಥಿಗಳನ್ನು ಹೋಗಳುತ್ತಾರೆ, ನನಗೆ ತುಂಬಾ ಖುಷಿಯಾಗುತ್ತದೆ.
ಶಾಲೆಯ ಇನ್ನೋರ್ವ ಶಿಕ್ಷಕರಾದ ಕು.ಯಲ್ಲಪ್ಪ ಬೊಮ್ಮನ್ ಜೋಗಿ ಇವ್ರು ತಮ್ಮ ಕವಿತೆ ಬರೆದು ಹಾಡಿದ್ದಾರೆ,
ಶ್ರೀಕಾಂತ ಗಾಣದಕಲ್ಲ ಸರ್ ಕೂಡಾ ಊರಿನ ಕೇಸರಿನ ಬಗ್ಗೆ ಸುಂದರವಾಗಿ ಬರೆದಿದ್ದಾರೆ, ಗುರುಮಾತೆಯರು ಬರೆಯುತ್ತೆವೆಂದು ಹೇಳಿದ್ದಾರೆ, ಹಾಗೇ 6 ನೆ ತರಗತಿಯಲ್ಲಿ 4 ಜನ ಬರೆಯುತ್ತಿದ್ದಾರೆ, 5 ನೆ ಕ್ಲಾಸ್ ಲ್ಲಿ 2 ಬರೆದಿದ್ದಾರೆ, 4 ನೆ ಕ್ಲಾಸ್ ಲ್ಲೀರೋ ಚೇತನ ಯಾಳವಾರ 4 ಕವನ 2 ಕಥೆ ಬರೆದಿದ್ದಾನೆ.. ನನ್ನ 7 ನೇ ತರಗತಿಯಲ್ಲಿ 10 ಜನ ಕವಿಗಳಿದ್ದಾರೆ... ಒಟ್ಟಾರೆಯಾಗಿ ಆ ಶಾಲೆ ನನಗೊಂದು #ಕವಿಗಳ_ಮನೆ ಅನಿಸಿದೆ...... ಸ್ನೇಹಿತರೆ... ನಿಮಗೆ ????????????????????????????? 
 ಏನು ಅನಿಸುತ್ತದೆ ಕಮೆಂಟ ಮಾಡಿ..
ಭಾಗ ಮೂರು  ತಪ್ಪದೆ ಓದಿ..🙏🙏🙏🙏🙏🙏🙏🙏🙏👫👫👫👫👫🙏🙏🙏🙏🙏🙏🙏🙏🙏
🌹🌹🌹🌹🌹🌹🌹🌹🌹🌹🌹🌹🌹🌹🌹🌹🌹

ಇಂತಿ ನಿಮ್ಮವ.. 
 ಎಮ್ ಜಿ.. ಸರ್ 
ಸಾ॥ ಯಂಭತ್ನಾಳ..

ಕಾಮೆಂಟ್‌ಗಳು

  1. ಇದನ್ನು ಓದಿ ಇವಗ ನನಗೂ ಏನೇನೋ ಬರೆಯುವ ಆಸೆ ಹುಟ್ಟುತ್ತಿದೆ sir ನಿಮಗೆ ನಿಮ್ಮ shala ಮಕ್ಕಳಿಗೆ ದೇವರು ಒಳ್ಳೆಯದನ್ನು ಮಾಡಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಲೇಖನ ಬರೆಯುವಂತ ಆಗಲಿ

    ಪ್ರತ್ಯುತ್ತರಅಳಿಸಿ
  2. ನಾನು ನನ್ನ ಅಜ್ಜನ ಕತೆಗಳನ್ನ ಬರಿದಿದ್ದೇ, ಅವನು ಓದಿಲ್ಲ ಆದರೂ ಕೂತಲ್ಲೇ ಹಾಡು ಕಟ್ಟುವ ಕಲೆ ಇತ್ತು, ನಾನು ಅವನ್ನ ಬರೆದು ಇಟ್ಟಿದ್ದೀನಿ, sir, ಅವನ್ನ ಕೇಳಿದರೆ ಮನಸ್ಸಿಗೆ ಏನೋ ಒಂದು kushi ಕೊಡುತ್ತೇ, dinanittya ನಡೆದ ಗಾಟನೆಗಳನ್ನೇ ಒಂದು ಕಥೆ ಮತ್ತು ಹಾಡು ರಡಿ ಮಾಡ್ತಾ ಇದ್ದ, ಆದರೆ ಇವಗ avarana ಕಳೆದುಕೊಂಡು 12 varsha aythu ಆದರೆ ಕಥೆ ಇನ್ನೂ ಇಟ್ಟಿದ್ದೀನಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿವಿಗಳೆಲ್ಲಾ ಕವಿಗಳಾದಾಗ ಭಾಗ ೧

ಕಿಗಳೆಲ್ಲಾ ಕವಿಗಳಾದಾಗ ಭಾಗ ೩